alex Certify ಬೆಚ್ಚಿಬೀಳಿಸುವಂತಿದೆ ಗಿನ್ನೆಸ್​ ದಾಖಲೆಗಾಗಿ ಈತ ಮಾಡಿದ ಹುಚ್ಚು ಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಗಿನ್ನೆಸ್​ ದಾಖಲೆಗಾಗಿ ಈತ ಮಾಡಿದ ಹುಚ್ಚು ಸಾಹಸ

ಗಿನ್ನೆಸ್​ ಪುಟದಲ್ಲಿ ಹೆಸರನ್ನ ದಾಖಲು ಮಾಡಬೇಕು ಅಂದರೆ ಯಾರೂ ಮಾಡಿರದ ಸಾಹಸವನ್ನೇ ಮಾಡಬೇಕು. ಇದಕ್ಕಾಗಿ ಜರ್ಮನಿಯ ವ್ಯಕ್ತಿಯೊಬ್ಬ ತನ್ನ ದೇಹದಲ್ಲಿ ಯಾರೂ ಮಾಡದ ಮಾರ್ಪಾಡನ್ನ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಜರ್ಮನಿಯ ರಾಲ್ಫ್​​ ಬುಚ್ಚೋಸ್​ ಎಂಬ ಹೆಸರಿನ ವ್ಯಕ್ತಿ ತನ್ನ ದೇಹವನ್ನ ಬರೋಬ್ವರಿ 516 ರೀತಿಗಳಲ್ಲಿ ಮಾರ್ಪಾಡು ಮಾಡಿದ್ದಾನೆ. ತನ್ನ 40 ನೇ ವರ್ಷದ ವಯಸ್ಸಿನಲ್ಲಿ ಈ ರೀತಿಯ ಸಾಹಸಕ್ಕೆ ಕೈ ಹಾಕಿದ ರಾಲ್ಫ್ ಮೊದಲು ತಮ್ಮ ದೇಹಕ್ಕೆ ಟ್ಯಾಟೂ ಹಾಕಿ ಕಿವಿಗೆ ಸ್ಟಡ್​ಗಳನ್ನ ಚುಚ್ಚಿಕೊಂಡಿದ್ದಾರೆ.

ಇದಾದ ನಂತರ 20 ವರ್ಷಗಳ ಕಾಲ ಮೈಮೇಲೆ ಟ್ಯಾಟೂ ಹಾಗೂ ಕಿವಿ, ತುಟಿ, ಮುಖದ ತುಂಬೆಲ್ಲ ಓಲೆಗಳನ್ನ ಚುಚ್ಚಿಕ್ಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ದೇಹ ಮಾರ್ಪಾಡು ಮಾಡಿಕೊಂಡ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ರಾಲ್ಪ್​, ನಾನು ದೈಹಿಕವಾಗಿ ಮಾತ್ರ ಬದಲಾಗಿದ್ದೇನೆ. ಆದರೆ ಮಾನಸಿಕವಾಗಿ ನನ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಂತಾ ಹೇಳಿದ್ದಾರೆ.

ರಾಲ್ಫ್​ ಈವರೆಗೆ 453 ಓಲೆಗಳನ್ನ ಚುಚ್ಚಿಕೊಂಡಿದ್ದಾರಂತೆ. 2010ರಲ್ಲೇ ರಾಲ್ಪ್​ ಗಿನ್ನೆಸ್​ ಗೌರವಕ್ಕೆ ಪಾತ್ರರಾಗಿದ್ರು. ಆದರೆ ಜನಪ್ರಿಯರಾಗಿರಲಿಲ್ಲ. 2014ರಲ್ಲಿ ದುಬೈ ಏರ್​ಪೋರ್ಟ್​ನಲ್ಲಿ ಬಂದಿದ್ದ ವೇಳೆ ರಾಲ್ಫ್​​ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...