alex Certify ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಗೆ 90 ವರ್ಷ; ಇಳಿ ವಯಸ್ಸಲ್ಲೂ ಜಿಮ್ ನಲ್ಲಿ ವರ್ಕೌಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಗೆ 90 ವರ್ಷ; ಇಳಿ ವಯಸ್ಸಲ್ಲೂ ಜಿಮ್ ನಲ್ಲಿ ವರ್ಕೌಟ್

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಅಮೆರಿಕದ ಜಿಮ್ ಅರಿಂಗ್ಟನ್ ತಮ್ಮ ಇಳಿಯ ವಯಸ್ಸಿನಲ್ಲೂ ಜಿಮ್ ಗೆ ಹೋಗುವುದನ್ನ ನಿಲ್ಲಿಸಿಲ್ಲ. ಹಲವು ದಶಕಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ ತಮ್ಮ ಕಟ್ಟುಮಸ್ತಾದ ದೇಹ ರೂಪಿಸಿಕೊಂಡಿರುವ ಅವರು ಈಗಲೂ ಜಿಮ್ ಗೆ ಹೋಗುವ ಉತ್ಸಾಹ ಹೊಂದಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಜಿಮ್ ಅರಿಂಗ್ಟನ್ ತಮ್ಮ 83 ನೇ ವಯಸ್ಸಿನಲ್ಲಿ 2015 ರಲ್ಲಿ ವಿಶ್ವದ ಅತ್ಯಂತ ಹಿರಿಯ ದೇಹದಾರ್ಢ್ಯಗಾರರಾಗಿ ವಿಶ್ವ ದಾಖಲೆ ಪುಸ್ತಕ ಸೇರಿದರು.

ಈಗ 90 ವರ್ಷ ವಯಸ್ಸಿನ ಜಿಮ್ ಇನ್ನೂ ಬಲಶಾಲಿಯಾಗಿದ್ದು ಈಗಲೂ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದಾರೆ. ಅವರು ಇತ್ತೀಚೆಗೆ ನೆವಾಡಾದ ರೆನೊದಲ್ಲಿ ನಡೆದ IFBB ಪ್ರೊಫೆಷನಲ್ ಲೀಗ್ ಈವೆಂಟ್‌ನಲ್ಲಿ ಸ್ಪರ್ಧಿಸಿದರು. ಪುರುಷರ 70 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಮೂರನೇ ಸ್ಥಾನ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

ಜಿಮ್ ಹೆಚ್ಚು ವಯಸ್ಸಿನ ಹೊರತಾಗಿಯೂ ಅದ್ಭುತ ಮೈಕಟ್ಟು ಹೊಂದಿದ್ದಾರೆ. ಅವರು ಇತ್ತೀಚೆಗೆ ಪುರುಷರ ಆರೋಗ್ಯ ನಿಯತಕಾಲಿಕೆಗಾಗಿ ನಗ್ನ ಪೋಸ್ ನೀಡಿದರು.

ಅವರು ಒಂದೂವರೆ ತಿಂಗಳು ಮುಂಚಿತವಾಗೇ ಜನಿಸಿದ್ದರು. ಆಗ ಅವರ ತೂಕ ಕೇವಲ 5.5 lb (2.5 kg) ಇತ್ತು. ಜಿಮ್ ಹೇಳುವಂತೆ ಅವರ ಹೆತ್ತವರು ಅವರನ್ನು ಉಳಿಸಿಕೊಳ್ಳಲು ತುಂಬಾ ಹೋರಾಡಿದ್ದರಂತೆ.

ಆಸ್ತಮಾದ ಜೊತೆಗೆ ಬಾಲ್ಯದಲ್ಲಿ ಅವರು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಆದಾಗ್ಯೂ 1947 ರಲ್ಲಿ 15 ನೇ ವಯಸ್ಸಿನಲ್ಲಿ ಜಿಮ್ ಅವರು ಇನ್ಮುಂದೆ ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ನಿರ್ಧರಿಸಿದರು. ನಾನು ಸೂಪರ್ ಹೀರೋ ಆಗಬೇಕೆಂದು ಬಯಸಿದ್ದೆ ಎಂದು ಜಿಮ್ ನೆನಪಿಸಿಕೊಳ್ಳುತ್ತಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ನನಗೆ ಸಂಪೂರ್ಣ ಹೊಸ ವಿಶ್ವವನ್ನು ತೆರೆದಿದೆ. ಇದೇ ರೀತಿ ಮುಂದುವರೆಯಲು ನನ್ನನ್ನು ಪ್ರೇರೇಪಿಸುತ್ತದೆ ಎಂದು ಜಿಮ್ ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...