alex Certify 24 ನಿಮಿಷದಲ್ಲಿ 50 ಕ್ಯಾಡ್​ಬರಿ ಕ್ರೀಮ್​ ಎಗ್ಸ್​ ತಿಂದು ತೇಗಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ನಿಮಿಷದಲ್ಲಿ 50 ಕ್ಯಾಡ್​ಬರಿ ಕ್ರೀಮ್​ ಎಗ್ಸ್​ ತಿಂದು ತೇಗಿದ ಭೂಪ

ಈಸ್ಟರ್​ ಹಬ್ಬ ಅಂದರೆ ಸಾಕು ಅದು ಚಾಕಲೇಟ್​ಗಳ ಹಬ್ಬ. ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆ ಅಮೂಲ್ಯ ಕ್ಷಣವನ್ನ ಕಳೆಯುವಂತಹ ಹಬ್ಬ. ಅದೇ ರೀತಿ ಯುಟ್ಯೂಬರ್​ ಮಾಕ್ಸ್ ಸ್ಟ್ಯಾಂಡ್​ಫೋರ್ಡ್​ ಕೂಡ ಈಸ್ಟರ್​ ಹಬ್ಬವನ್ನ ಆಚರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಮ್ಯಾಕ್ಸ್ ಕೇವಲ 24 ನಿಮಿಷಗಳಲ್ಲಿ ಬರೋಬ್ಬರಿ 50 ಕ್ಯಾಡ್​ಬರಿ ಕ್ರೀಮ್​ ಎಗ್ಸ್​ ತಿಂದು ತೇಗಿದ್ದಾರೆ. ಈ ಫುಡ್​ ಚಾಲೆಂಜ್​ ವಿಡಿಯೋವನ್ನ ಮ್ಯಾಕ್ಸ್ ತಮ್ಮ ಯುಟ್ಯೂಬ್​ ಚಾನೆಲ್​ ಮ್ಯಾಕ್ಸ್ ವರ್ಸಸ್​ ಫುಡ್​ನಲ್ಲಿ ಹರಿಬಿಟ್ಟಿದ್ದಾರೆ.

ಈ ಚಿತ್ರದಲ್ಲಿರುವ ಕೋಲಾ ಕ್ಯಾನ್‌ಗಳೆಷ್ಟು….? ನಿಮ್ಮ ಗ್ರಹಿಕೆಗೆ ಇಲ್ಲಿದೆ ಒಂದು ಸವಾಲ್

50 ಕ್ರೀಮ್​ ಎಗ್​ನಲ್ಲಿ ಹೆಚ್ಚು ಕಡಿಮೆ 1.3 ಕೆಜಿ ಸಕ್ಕರೆ ಅಂಶವಿದೆ. ಆದರೆ ನೀರನ್ನ ಕುಡಿಯುತ್ತಾ ಬಳಿಕ ಈ ಚಾಕಲೇಟ್​ನ್ನು ತಿನ್ನುವ ಮೂಲಕ ಮ್ಯಾಕ್ಸ್ ಈ ಚಾಲೆಂಜ್​ ಪೂರ್ತಿ ಮಾಡಿದ್ದಾರೆ. ಇದು ತುಂಬಾ ಗಟ್ಟಿಯಾಗಿದೆ. ನೀವು ಸರಿಯಾಗಿ ಅಗಿದೇ ತಿನ್ನಬೇಕು. ಮಧ್ಯದಲ್ಲಿ ಸಿಕ್ಕಾಪಟ್ಟೆ ಸಿಹಿಯ ಅಂಶವಿದೆ. ಅಲ್ಲದೇ ಚಾಕಲೇಟ್​​ನ್ನು ಬೇಗ ಬೇಗ ತಿನ್ನೋದು ಒಂದು ಕಷ್ಟದ ಕೆಲಸ ಎಂದು ಮ್ಯಾಕ್ಸ್ ತಮ್ಮ ಅನುಭವವನ್ನ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...