alex Certify ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್​ 19 ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್​ 19 ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ

ಕೊರೊನಾ ವೈರಸ್​ ಬಗ್ಗೆ ಇನ್ನೂ ಹಲವು ಗೊಂದಲಗಳು ಇರುವಾಗಲೇ ಕೆನಡಾದ ಅಧ್ಯಯನವೊಂದು ಕೋವಿಡ್ 19 ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಭಯಾನಕವಾಗಿದೆ ಎಂದು ಹೇಳಿದೆ.‌

ಇತರೆ ಯಾವುದೇ ಜ್ವರಕ್ಕಿಂತ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3.5 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.

ಕೊರೊನಾ ವೈರಸ್​ ಹಾಗೂ ಜ್ವರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಹಾಗೂ ಕೊರೊನಾಗಿಂತ ಜ್ವರದಿಂದ ಮೃತರಾದವರ ಸಂಖ್ಯೆಯೇ ಹೆಚ್ಚು ಹೀಗೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಈ ಸಂಶೋಧನೆ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕೋವಿಡ್​ 19 ಸಾಮಾನ್ಯ ಜ್ವರಕ್ಕಿಂತ ಅತಿ ಹೆಚ್ಚು ಭಯಾನಕವಾಗಿದೆ ಎಂಬ ಅಂಶ ಹೊರಬಿದ್ದಿದೆ.

ಬಾತ್​ ರೂಮ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ

ಕೆನಡಿಯನ್​ ಮೆಡಿಕಲ್​ ಅಸೋಸಿಯೇಷನ್​ ಜರ್ನಲ್​ 2019ರ ನವೆಂಬರ್​ನಿಂದ 2020ರ ಜೂನ್​ 30ರವರೆಗೆ ಕೆನಡಾದ 7 ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಸಾಮಾನ್ಯ ಜ್ವರದಿಂದ ಐಸಿಯುವಿನಲ್ಲಿ ದಾಖಲಾದವರು ಹಾಗೂ ಕೊರೊನಾದಿಂದ ಐಸಿಯುವಿನಲ್ಲಿ ಇರುವವರನ್ನ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಈ ಅಧ್ಯಯನದ ಬಳಿಕ ನಾವು ಕೊರೊನಾ ಸಾಮಾನ್ಯ ಜ್ವರಕ್ಕಿಂತ ಅತ್ಯಂತ ಭಯಾನಕವಾಗಿದೆ ಎಂಬ ವಿಚಾರವನ್ನ ಖಂಡಿತವಾಗಿ ಹೇಳಬಹುದಾಗಿದೆ ಎಂದು ಸೇಂಟ್​ ಮೈಕೆಲ್​ ಆಸ್ಪತ್ರೆಯ ಡಾ. ಅಮೊಲ್​ ವರ್ಮಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...