alex Certify ಬಾತ್​ ರೂಮ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್​ ರೂಮ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ

ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಯೊಂದು ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿತ್ತೂರು ಜಿಲ್ಲೆಯ ಭಾರತಿಮಿಟ್ಟಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ದಂಪತಿಯನ್ನ 32 ವರ್ಷದ ಎಸ್​. ಅಲ್ತಫ್​​ ಹುಸೇನ್​ ಹಾಗೂ 30 ವರ್ಷದ ಸಮಿಯಾ ಎಂದು ಗುರುತಿಸಲಾಗಿದೆ.

ಮೃತ ಸಮಿಯಾ ಗ್ರಾಮೀಣ ಮಹಿಳಾ ಸಂಖ್ಯಾತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ತಫ್​​ ಬೆಂಗಳೂರಿನ ಸಾಫ್ಟ್​ವೇರ್​ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಕಳೆದ 8-9 ತಿಂಗಳಿನಿಂದ ವರ್ಕ್​ ಫ್ರಂ ಹೋಂನಲ್ಲಿದ್ದರು ಎನ್ನಲಾಗಿದೆ. ಸಮಿಯಾ ಸಹೋದ್ಯೋಗಿಗಳು ಗುರವಾರ ಆಕೆಯ ಮನೆಗೆ ಬಂದು ಬಾಗಿಲು ಬಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್

ಕೂಡಲೇ ಪೊಲೀಸ್​ ಠಾಣೆಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ದಂಪತಿ ಕರೆಂಟ್​ ಶಾಕ್​ನಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಅನುಮಾನವೂ ಶುರುವಾಗಿದೆ. ಮೃತರ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...