alex Certify ನಗು ತರಿಸುತ್ತೆ‌ ಕರ್ಫ್ಯೂ ವೇಳೆ ಮನೆಯಿಂದ ಹೊರಬರಲು ಈತ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ‌ ಕರ್ಫ್ಯೂ ವೇಳೆ ಮನೆಯಿಂದ ಹೊರಬರಲು ಈತ ಮಾಡಿದ ಪ್ಲಾನ್

ಯುರೋಪ್​ ರಾಜ್ಯಗಳಲ್ಲಿ ಕೊರೊನಾ ಎರಡನೆ ಅಲೆ ಶುರುವಾಗಿರೋದ್ರಿಂದ ಜನರಿಗೆ ಮನೆಯಿಂದ ಹೊರಬರೋದು ಕಷ್ಟವಾಗ್ತಿದೆ.

ಹೇಗಾದ್ರೂ ಮಾಡಿ ಮನೆಯಿಂದ ಹೊರಬರಬೇಕು ಅಂತಾ ಜನರು ಚಿತ್ರವಿಚಿತ್ರ ಪ್ಲಾನ್​ ಮಾಡ್ತಿದ್ದಾರೆ.

ಜೆಕ್​ ಗಣರಾಜ್ಯದಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನ ವಾಕಿಂಗ್​​ಗೆ ಕರೆದುಕೊಂಡು ಬರುವ ನೆಪದಲ್ಲಿ ಮನೆಯಿಂದ ಹೊರಬಂದಿದ್ದಾರೆ.

ಇದರಲ್ಲಿ ವಿಶೇಷತೆ ಏನು ಅಂದ್ರಾ..? ಆ ವ್ಯಕ್ತಿ ತೆಗೆದುಕೊಂಡು ಬಂದಿದ್ದು ಆಟಿಕೆ ನಾಯಿಯನ್ನ.

ಜೆಕ್​ ಗಣರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತೆ. ಆದರೆ ಈ ವೇಳೆ ಸಾಕು ಪ್ರಾಣಿಗಳನ್ನ ವಾಕಿಂಗ್​ ಕರೆದುಕೊಂಡು ಬರಲು ಅನುಮತಿ ಇದೆ. ಹೀಗಾಗಿ ಆಟಿಕೆ ನಾಯಿಯೊಂದಿಗೆ ಈ ವ್ಯಕ್ತಿ ಬಂದಿದ್ದ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ರೀತಿ ಕೆಲಸ ಮಾಡಿದ ವ್ಯಕ್ತಿಗೆ ವಾರ್ನ್​ ಮಾಡಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...