ಯುರೋಪ್ ರಾಜ್ಯಗಳಲ್ಲಿ ಕೊರೊನಾ ಎರಡನೆ ಅಲೆ ಶುರುವಾಗಿರೋದ್ರಿಂದ ಜನರಿಗೆ ಮನೆಯಿಂದ ಹೊರಬರೋದು ಕಷ್ಟವಾಗ್ತಿದೆ.
ಹೇಗಾದ್ರೂ ಮಾಡಿ ಮನೆಯಿಂದ ಹೊರಬರಬೇಕು ಅಂತಾ ಜನರು ಚಿತ್ರವಿಚಿತ್ರ ಪ್ಲಾನ್ ಮಾಡ್ತಿದ್ದಾರೆ.
ಜೆಕ್ ಗಣರಾಜ್ಯದಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನ ವಾಕಿಂಗ್ಗೆ ಕರೆದುಕೊಂಡು ಬರುವ ನೆಪದಲ್ಲಿ ಮನೆಯಿಂದ ಹೊರಬಂದಿದ್ದಾರೆ.
ಇದರಲ್ಲಿ ವಿಶೇಷತೆ ಏನು ಅಂದ್ರಾ..? ಆ ವ್ಯಕ್ತಿ ತೆಗೆದುಕೊಂಡು ಬಂದಿದ್ದು ಆಟಿಕೆ ನಾಯಿಯನ್ನ.
ಜೆಕ್ ಗಣರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತೆ. ಆದರೆ ಈ ವೇಳೆ ಸಾಕು ಪ್ರಾಣಿಗಳನ್ನ ವಾಕಿಂಗ್ ಕರೆದುಕೊಂಡು ಬರಲು ಅನುಮತಿ ಇದೆ. ಹೀಗಾಗಿ ಆಟಿಕೆ ನಾಯಿಯೊಂದಿಗೆ ಈ ವ್ಯಕ್ತಿ ಬಂದಿದ್ದ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ರೀತಿ ಕೆಲಸ ಮಾಡಿದ ವ್ಯಕ್ತಿಗೆ ವಾರ್ನ್ ಮಾಡಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.