alex Certify ಶೇವಿಂಗ್​ ಕ್ರೀಂ ಎಂದುಕೊಂಡು ಹೇರ್​ ರಿಮೂವಲ್​ ಕ್ರೀಂ ಹಚ್ಚಿಕೊಂಡ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇವಿಂಗ್​ ಕ್ರೀಂ ಎಂದುಕೊಂಡು ಹೇರ್​ ರಿಮೂವಲ್​ ಕ್ರೀಂ ಹಚ್ಚಿಕೊಂಡ ಭೂಪ..!

ಕೂದಲನ್ನ ತೆಗೆಯುವ ಕ್ರೀಮ್​ನ್ನು ಶೇವಿಂಗ್​ ಕ್ರೀಮ್​ ಎಂದು ತಪ್ಪಾಗಿ ಅರ್ಥೈಸಿಕೊಂಡ ವ್ಯಕ್ತಿಯೊಬ್ಬ ಅದನ್ನ ಮುಖಕ್ಕೆಲ್ಲ ಹಚ್ಚಿಕೊಂಡು ಪೇಚಿಗೆ ಸಿಲುಕಿದ್ದಾನೆ. ಆಸ್ಟ್ರೇಲಿಯಾದ ರೋನಾಲ್ಡ್​ ವಾಕರ್​ ಎಂಬಾತ ಈ ಯಡವಟ್ಟಿನಿಂದಾಗಿ ತನ್ನ ಕಣ್ಣು ಹುಬ್ಬಿನ ಕೂದಲು ಹಾಗೂ ತಲೆಗೂದಲನ್ನ ಕಳೆದುಕೊಂಡಿದ್ದಾನೆ.

22 ವರ್ಷದ ರೊನಾಲ್ಡ್​ರ ಶೇವಿಂಗ್​ ಕ್ರೀಂ ಖಾಲಿಯಾಗಿದ್ದರಿಂದ ಹೊಸ ಕ್ರೀಂನ್ನು ಬಳಕೆ ಮಾಡಲು ಮುಂದಾಗಿದ್ದರು. ಆದರೆ ಅವರು ಶೇವಿಂಗ್​ ಕ್ರೀಮ್​ನ ಬದಲಾಗಿ ಕೂದಲನ್ನ ತೆಗೆಯುವ ಕ್ರೀಂನ್ನು ತಪ್ಪಾಗಿ ಆಯ್ಕೆಮಾಡಿಕೊಂಡಿದ್ದರು. ಈ ಕ್ರೀಮ್​​ನ್ನು ಮುಖದ ತುಂಬೆಲ್ಲ ಹಚ್ಚಿಕೊಂಡಿದ್ದಾರೆ.

ನನಗೆ ಎಂದಿಗೂ ಶೇವಿಂಗ್​ ಕ್ರೀಂ ಹಾಗೂ ಹೇರ್​ ರಿಮೂವಲ್​ ಕ್ರೀಂ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಆದರೆ ಇಂದಿನ ಅನುಭವದ ಬಳಿಕ ನನಗೆ ಇವೆರಡರ ನಡುವಿನ ವ್ಯತ್ಯಾಸ ಗೊತ್ತಾಗಿದೆ ಎಂದು ಫೇಸ್​​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಕ್ರೀಂನ್ನು ಹಾಕುತ್ತಿದ್ದಂತೆಯೇ ನನ್ನ ಮುಖ ಕೆಂಪಗಾಗತೊಡಗಿತು. ಅದೃಷ್ಟವಶಾತ್​​ ನಾನು ಗಡ್ಡಧಾರಿಯಲ್ಲ. ಆದರೆ ಇದೀಗ ನನ್ನ ತಲೆಯ ಮುಂಭಾಗದ ಕೂದಲು ಹಾಗೂ ಹುಬ್ಬಿನ ಕೂದಲು ಹೋಗಿದೆ ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಈ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...