alex Certify ತಿಮಿಂಗಿಲ ರಕ್ಷಿಸಿದವನು ಈಗ ತೆರಬೇಕು ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಮಿಂಗಿಲ ರಕ್ಷಿಸಿದವನು ಈಗ ತೆರಬೇಕು ದಂಡ

ಸಮುದ್ರದಲ್ಲಿ ಬಲೆಗೆ ಸಿಲುಕಿದ್ದ ಮರಿ ತಿಮಿಂಗಿಲವನ್ನು ಸಾಹಸಿಗನೊಬ್ಬ ರಕ್ಷಿಸಿದ ಪ್ರಸಂಗ ನಡೆದಿದ್ದು, ಈ ಸಾಹಸಕ್ಕೆ ದಂಡ ಕಟ್ಟುವ ಪ್ರಸಂಗ ಎದುರಾಗಿದೆ.

ಕ್ವೀನ್ಸ್‌ಲ್ಯಾಂಡ್ ನ ಜಾಂಗೊ ಎಂಬಾತ ಈ ಸಾಹಸ ಮೆರೆದಿದ್ದು, ಜಾಲತಾಣದಲ್ಲಿ ಸಖತ್ ಪ್ರಶಂಸೆ ಗಳಿಸಿದ್ದಾರೆ. ಈ ನಡುವೆ ಕ್ವೀನ್ಸ್ ಲ್ಯಾಂಡ್ ಕಾನೂನು ಪ್ರಕಾರ ತಿಮಿಂಗಿಲವನ್ನು ಸಮೀಪಿಸುವುದು ಅಪರಾಧ.

ಬೋಟ್ ನಲ್ಲಿದ್ದ ಜಾಂಗೊ, ಮರಿ ತಿಮಿಂಗಿಲ ಬಲೆಯಲ್ಲಿ‌ ಸಿಲುಕಿರುವುದನ್ನು ಗಮನಿಸಿ ರಕ್ಷಿಸುವುದಕ್ಕಾಗಿ ಸಮುದ್ರಕ್ಕೆ ಜಿಗಿಯುತ್ತಾರೆ. ಬಳಿಕ ಸಾವಧಾನವಾಗಿ ಬಲೆಯಿಂದ ಅದನ್ನು ಕಾಪಾಡುತ್ತಾರೆ. ಇಡೀ ಕಾರ್ಯಾಚರಣೆ ಡ್ರೋಣ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿತ್ತು.

ಇದೀಗ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಜಾಂಗೊಗೆ 46 ಸಾವಿರ ಡಾಲರ್ ದಂಡ ಬೀಳಬಹುದೆಂಬ ಚರ್ಚೆ ನಡೆದಿದ್ದು, ಅಲ್ಲಿನ ಮೀನುಗಾರಿಕೆ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...