alex Certify ದಿವ್ಯಾಂಗ ಮಡದಿಯ ಸಂಚಾರಕ್ಕೆ ವಿಶೇಷ ಬೈಕ್ ಸಿದ್ಧಪಡಿಸಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿವ್ಯಾಂಗ ಮಡದಿಯ ಸಂಚಾರಕ್ಕೆ ವಿಶೇಷ ಬೈಕ್ ಸಿದ್ಧಪಡಿಸಿದ ಪತಿ

ತನ್ನ ದಿವ್ಯಾಂಗ ಮಡದಿಗೆಂದು ವಿಶೇಷವಾದ ವಾಹನವೊಂದನ್ನು ಸಿದ್ದಪಡಿಸಿರುವ ಸಹೃದಯಿ ಪತಿಯೊಬ್ಬರು ಆಕೆಯ ಸಾಹಸ ಪ್ರವೃತ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ JerryRigEverything ಎಂಬ ಹೆಸರಿನಿಂದ ಖ್ಯಾತರಾಗಿರುವ ಝಾಕ್ ನೆಲ್ಸನ್‌ ವೃತ್ತಿಯಲ್ಲಿ ಇಂಜಿನಿಯರ್‌ ಆಗಿದ್ದು, ಬಹಳಷ್ಟು ಕ್ರಿಯಾಶೀಲ ವಸ್ತುಗಳನ್ನು ರಚಿಸುವುದಲ್ಲಿ ಸಿದ್ಧಹಸ್ತರು. ತಮ್ಮ ಮಡದಿ ಕ್ರಾಂಬ್ರಿ ಕೇಲರ್‌ಗೆಂದು ಸಿದ್ಧಪಡಿಸಿರುವ ಈ ವಿನೂತನ ರಚನೆಯಿಂದ ನೆಲ್ಸನ್‌ ನೆಟ್ಟಿಗರ ಹೃದಯ ಗೆದ್ದಿದ್ದಾರೆ.

ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಸೇರಿಸಿಕೊಂಡು ಮಧ್ಯದಲ್ಲಿ ಸೀಟನ್ನು ಇಟ್ಟು ರಚಿಸಿದ ಈ ವಿಶಿಷ್ಟ ವಿನ್ಯಾಸದ ವಾಹನದಿಂದ ತಮ್ಮ ಮಡದಿಯ ಆಸೆಯನ್ನು ಪೂರೈಸುತ್ತಿದ್ದಾರೆ ನೆಲ್ಸನ್. ಈ ವಾಹನವು ಗಂಟೆಗೆ 20 ಕಿಮೀ ವೇಗದಲ್ಲಿ ಸಂಚರಿಸಬಲ್ಲದಾಗಿದ್ದು, ಒಮ್ಮೆ ಚಾರ್ಚ್ ಮಾಡಿದಲ್ಲಿ 15-34 ಕಿಮೀಗಳವರೆಗೂ ಹೋಗಬಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...