alex Certify ಗಿಫ್ಟ್​ ಆಸೆಗಾಗಿ ಏಕಕಾಲದಲ್ಲಿ ಬರೋಬ್ಬರಿ 35 ಮಂದಿಯನ್ನ ಪ್ರೀತಿಸಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಫ್ಟ್​ ಆಸೆಗಾಗಿ ಏಕಕಾಲದಲ್ಲಿ ಬರೋಬ್ಬರಿ 35 ಮಂದಿಯನ್ನ ಪ್ರೀತಿಸಿದ ಭೂಪ..!

ಪ್ರೀತಿ ಮಾಯೆ ಹುಷಾರು ಅಂತಾರೆ..! ಒಮ್ಮೆ ಈ ಪ್ರೇಮಪಾಶಕ್ಕೆ ಬಿದ್ದಿರಿ ಅಂದರೆ ಮುಗೀತು, ಮತ್ತೆ ಅದರಿಂದ ಎದ್ದು ಬರೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.

ಹಾಗಂತ ಎಲ್ಲರ ಪ್ರೀತಿಯಲ್ಲೂ ಪ್ರಾಮಾಣಿಕತೆ ಇರುತ್ತೆ ಎಂದು ನಿರೀಕ್ಷೆ ಮಾಡೋಕೆ ಆಗೋದಿಲ್ಲ. ಜಪಾನಿನ ವ್ಯಕ್ತಿಯೊಬ್ಬ ಏಕಕಾಲದಲ್ಲಿ ಬರೋಬ್ಬರಿ 35 ಯುವತಿಯರ ಜೊತೆ ನಕಲಿ ಪ್ರೇಮದ ನಾಟಕವಾಡಿ ಇದೀಗ ಜೈಲು ಪಾಲಾಗಿದ್ದಾನೆ.

ಅಂದಹಾಗೆ ಆತ ತನ್ನ ನಕಲಿ ಬರ್ತಡೇಗಳಂದು ಉಡುಗೊರೆಗಳು ಸಿಗುತ್ತೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದನಂತೆ. ಎಲ್ಲಾ 35 ಯುವತಿಯರ ಬಳಿಯೂ ತಾನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದೇನೆ ಎಂದು ಕಾಗೆ ಹಾರಿಸಿದ್ದಾನೆ.

ದಕ್ಷಿಣ ಜಪಾನ್​​ ಕನ್ಸೈ ವ್ಯಾಪ್ತಿಯಲ್ಲಿ ಪಾರ್ಟ್​ ಟೈಮ್​ ಕೆಲಸಗಾರನಾಗಿದ್ದ ಈ ವ್ಯಕ್ತಿಯು ತಾನು ಪ್ರೀತಿಸುತ್ತಿದ್ದ ಒಂದೊಂದು ಯುವತಿಯರ ಬಳಿ ಒಂದೊಂದು ಬರ್ತಡೇ ದಿನಾಂಕವನ್ನ ಹೇಳಿದ್ದಾನೆ. ಹಾಗೂ ತನ್ನ ಈ ಬರ್ತ ಡೇ ದಿನದಂದು ಉಡುಗೊರೆಗಳನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ತನ್ನ 47 ವರ್ಷದ ಪ್ರೇಯಸಿ ಬಳಿ ನನ್ನ ಜನ್ಮ ದಿನ ಫೆಬ್ರವರಿ 22ರಂದು ಎಂದು ಹೇಳಿದ್ದಾನೆ. ಇನ್ನೊಬ್ಬ 40 ವರ್ಷದ ಮಹಿಳೆಯ ಬಳಿ ಜುಲೈ ಎಂದಿದ್ದಾನೆ. ಮತ್ತೊಬ್ಬಳ ಬಳಿ ಏಪ್ರಿಲ್​ ಎಂದಿದ್ದಾನೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ದಿನಾಂಕವನ್ನ ಹೇಳಿದ್ದಾನೆ. ಅಂದಹಾಗೆ ಆತನ ನಿಜವಾದ ಜನ್ಮದಿನ ನವೆಂಬರ್​ 14.

ಜಪಾನಿ ರೋಮಿಯೋ 39 ವರ್ಷದ ಮಿಯಾಗವಾ ತನ್ನ ಜನ್ಮದಿನದಂದು ಈ ಮಹಿಳೆಯರ ಬಳಿ 69,442 ರೂಪಾಯಿ ಮೌಲ್ಯಕ್ಕಿಂತಲೂ ಹೆಚ್ಚಿನ ದರದ ಉಡುಗೊರೆಗಳನ್ನ ಪಡೆದಿದ್ದಾನೆ. ಜಪಾನ್​ನ ಸುದ್ದಿ ವಾಹಿನಿಯೊಂದರ ಪ್ರಕಾರ ಈತನಿಗೆ 35ಕ್ಕಿಂತಲೂ ಹೆಚ್ಚು ಪ್ರೇಯಸಿಯರಿದ್ದಾರೆ.

ಕಂಪನಿಯೊಂದರಲ್ಲಿ ಪಾರ್ಟ್ ಟೈಮ್​ ಸೇಲ್ಸ್​ ಮ್ಯಾನ್​ ಆಗಿದ್ದ ಈತ ಹೈಡ್ರೋಜನ್​ ವಾಟ್​ ಹಾಗೂ ಶೋವರ್​ ಹೆಡ್ಸ್ ಮಾರಾಟ ಮಾಡುವ ವೇಳೆಯಲ್ಲಿ ಈ ಎಲ್ಲಾ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈತ ಉಡುಗೊರೆಗಳನ್ನ ಪಡೆದಿದ್ದು ಮಾತ್ರವಲ್ಲದೇ ಈ ಎಲ್ಲಾ ಮಹಿಳೆಯರಿಗೆ ತನ್ನ ಕಂಪನಿಯ ಉತ್ಪನ್ನಗಳನ್ನ ಮಾರಾಟ ಮಾಡ್ತಿದ್ದ ಎನ್ನಲಾಗಿದೆ.

ಪ್ರತಿಯೊಂದು ಮಹಿಳೆಯನ್ನ ಭೇಟಿ ಮಾಡಿದ ವೇಳೆಯೂ ತಾನೂ ಶೀಘ್ರದಲ್ಲೇ ನಿನ್ನನ್ನು ಮದುವೆಯಾಗುತ್ತೇನೆ ಎಂದು ಸುಳ್ಳು ಹೇಳ್ತಿದ್ದನಂತೆ. ಈತನ ಕಳ್ಳಾಟ ತಿಳಿದ ಮಹಿಳೆಯರು ಒಂದಾಗಿ ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...