alex Certify ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ ವೀಲ್ ಬಳಿ ಹಾವು ಕಾಣಿಸಿಕೊಂಡಿದೆ, ಅಲ್ಲಿಂದ ಹೋರಾಟ ಶುರುವಾಗಿದೆ, ಬಳಿಕ ಏನಾಯಿತು..? ಮುಂದೆ ಓದಿ.

ಜಿಮ್ಮಿ ಎಂಬಾತ ಕಾರಿನಲ್ಲಿ ಹೊರಗೆ ಹೊರಟು ಹಲವು ಕಿ.ಮೀ. ಕ್ರಮಿಸಿದಾಗ ಹಾವು ಕಾಣಿಸಿಕೊಂಡಿದ್ದು, ಕಾಲನ್ನು ಅಲುಗಾಡಿಸಲು ಹೋದರೆ ಕಚ್ಚೀತೆಂಬ ಭಯ ಕಾಡಿತ್ತು. ಕೊನೆಗೆ ಅದೇ 100 ಕಿ.ಮೀ.ವೇಗದಲ್ಲಿ ಹೋಗುತ್ತಲೇ ಸೀಟ್ ಬೆಲ್ಟ್ ಮತ್ತು ಚಾಕುವಿನ ಸಹಾಯದಿಂದ ಹಾವಿನ ಮೇಲೆ ದಾಳಿ ಮಾಡಿದ್ದಾನೆ.

ಹೀಗೆ ಹಲವು ಸುತ್ತಿನ ಹೋರಾಟದ ಮಧ್ಯೆ ಹಾವನ್ನು ಕೊಂದು ಹಾಕುವಲ್ಲಿ ಜಿಮ್ಮಿ ಯಶಸ್ವಿಯಾಗಿದ್ದಾನೆ. ಆದರೆ, ಅಲ್ಲಿನ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘನೆ ಕಾರಣಕ್ಕೆ ಠಾಣೆಗೆ ಕರೆದೊಯ್ದರು. ನಿಜ ಸಂಗತಿಯನ್ನು ತಿಳಿಸಿದಾಗ ಬಿಡುಗಡೆಗೊಳಿಸಿದರು. ಇಷ್ಟಾದರೂ ಭಯದಲ್ಲಿದ್ದ ಜಿಮ್ಮಿಯನ್ನು ವೈದ್ಯರಿಗೆ ತೋರಿಸಲಾಗಿ, ಹಾವು ಕಚ್ಚಿದ ಕುರುಹುಗಳಿಲ್ಲ, ಆರಾಮಾಗಿದ್ದಾರೆ ಎಂದು ಹೇಳಿದ್ದರಿಂದ ಎಲ್ಲರೂ ನಿರಾಳರಾಗಿದ್ದಾರೆ.

Driver fights off deadly snake on highway

This slimy passenger would be sure to make any driver hysssssterical! ??

Posted by Queensland Police Service on Monday, July 6, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...