alex Certify ಅಕ್ಕನ ಮಗುವಿಗೆ ವಿಚಿತ್ರ ಹೆಸರಿಟ್ಟ ವಿಡಿಯೋ ಗೇಮ್​ ಪ್ರಿಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕನ ಮಗುವಿಗೆ ವಿಚಿತ್ರ ಹೆಸರಿಟ್ಟ ವಿಡಿಯೋ ಗೇಮ್​ ಪ್ರಿಯ…!

ವಿಡಿಯೋ ಗೇಮ್​​ಗಳ ಮೇಲೆ ವಿಪರೀತ ಆಸಕ್ತಿಯನ್ನ ಹೊಂದಿದ್ದ ಯುವಕನೊಬ್ಬ ತನ್ನ ಅಕ್ಕನ ಮಗುವಿಗೂ ಪೋಕ್​ಮ್ಯಾನ್​ ಗೇಮ್​​​ನ ಪಾತ್ರವೊಂದರ ಹೆಸರನ್ನೇ ನಾಮಕರಣ ಮಾಡುವ ಮೂಲಕ ಸುದ್ದಿಯಾಗಿದ್ದಾನೆ.

ಪೋಕ್​ಮ್ಯಾನ್​ ಗೇಮ್​ ಸಿರೀಸ್​​​​ನಲ್ಲಿ ಬರುವ ಪಾತ್ರಗಳ ಹೆಸರು ಕೇಳಲು ವಿಚಿತ್ರ ಎನಿಸುವಂತಿರುತ್ತೆ. ಆದರೆ ಈ ಯುವಕನ ವಿಡಿಯೋ ಗೇಮ್​​ ಪ್ರೇಮ ಮಾತ್ರ ಈ ವಿಚಿತ್ರ ಹೆಸರುಗಳಿಗೂ ಬೆಲೆ ಸಿಗುವಂತೆ ಮಾಡಿದೆ.

ಈತನ ಅಕ್ಕ ತನ್ನ ಗಂಡು ಮಗುವಿಗೆ ಏನಾದರೂ ವಿಶೇಷವಾದ ಹೆಸರನ್ನ ಇಡಬೇಕು ಎಂದು ಯೋಚಿಸುತ್ತಿದ್ದರಂತೆ. ಇದೇ ವೇಳೆ ಪೋಕ್​ಮ್ಯಾನ್​ ಸ್ವೊರ್ಡ್ & ಶೀಲ್ಡ್​ ಗೇಮ್​​ನಲ್ಲಿ ಬರುವ ಝೇಷಿಯನ್​ ಎಂಬ ವಿಚಿತ್ರ ಹೆಸರನ್ನ ನಾಮಕರಣ ಮಾಡುವಂತೆ ಸಹೋದರ ಸಲಹೆ ನೀಡಿದ್ದಾನೆ.

ಮಗುವಿಗೆ ಝೆಡ್​​ ಹೆಸರಿನಿಂದ ಆರಂಭವಾಗುವ ಹೆಸರನ್ನೇ ಹುಡುಕುತ್ತಿದ್ದ ಸಹೋದರಿ ಈ ಹೆಸರಿಗೆ ಜೈ ಎಂದಿದ್ದಾರೆ. ಅಂದಹಾಗೆ ಜಪಾನ್​ ಭಾಷೆಯಲ್ಲಿ ಝೇಷಿಯನ್​ ಎಂದರೆ ಕತ್ತಿ ಎಂಬ ಅರ್ಥವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...