alex Certify ಅದೃಷ್ಟ ಅಂದ್ರೆ ಇದಪ್ಪಾ…! ಇಂತದ್ದು ಒಲಿಯುವುದು ಬಲು ಅಪರೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪಾ…! ಇಂತದ್ದು ಒಲಿಯುವುದು ಬಲು ಅಪರೂಪ

ನ್ಯೂಯಾರ್ಕ್: ಆತನಿಗೆ ಅದೃಷ್ಟ ಒಲಿದಿದ್ದು, ಒಮ್ಮೆ, ಎರಡು ಮೂರು ಬಾರಿಯಲ್ಲ ಬರೊಬ್ಬರಿ 25 ಬಾರಿ…!
ಅಮೆರಿಕ ವರ್ಜೀನಿಯಾದ ರೇಮಂಡ್ ಹ್ಯಾರಿಂಗ್ಟನ್ ಎಂಬುವವರು ಖರೀದಿಸಿದ್ದ 25 ಲಾಟರಿಗಳಿಗೆ ಒಟ್ಟು 1,25,000 ಡಾಲರ್ ಬಹುಮಾನ ಪಡೆದಿದ್ದಾರೆ.

ಹ್ಯಾರಿಂಗ್ಟನ್ ವರ್ಜೀನಿಯಾ ಬೀಚ್‌ನ ಸಮೀಪ ಇರುವ ವೆಗ್ನಮ್ಸ್ ಅಂಗಡಿಗೆ ತೆರಳಿ ತಲಾ 1 ಡಾಲರ್ ಕೊಟ್ಟು ವರ್ಜೀನಿಯಾ ಲಾಟರೀಸ್ ನ 25 ಲಾಟರಿ ಟಿಕೆಟ್ ಖರೀದಿಸಿದ್ದರು.

ಜುಲೈ 17 ರಂದು ಲಾಟರಿ ಡ್ರಾ ನಡೆದಿದ್ದು, ಹ್ಯಾರಿಂಗ್ಟನ್ ನಂಬಲಸಾಧ್ಯವಾದ ಫಲಿತಾಂಶ ಬಂದಿದೆ. 25 ಟಿಕೆಟ್‌ಗಳಿಗೂ ತಲಾ 5 ಸಾವಿರ ಡಾಲರ್ ಬಹುಮಾನ ಬಂದಿದೆ. ಹ್ಯಾರಿಂಗ್ಟನ್ ಈಗ ಆ ಹಣವನ್ನು ತನ್ನ ಮಕ್ಕಳ ಕಾಲೇಜ್ ಶಿಕ್ಷಣಕ್ಕಾಗಿ ಖರ್ಚು ಮಾಡಲಿದ್ದಾರೆ.

ಇನ್ನು 30 ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬ ಕೆಲವು ತಿಂಗಳ ಹಿಂದೆ 1 ಮಿಲಿಯನ್ ಡಾಲರ್ ಲಾಟರಿ ಬಹುಮಾನ ಗೆದ್ದಿದ್ದ. ಕೊಲೆರೊಡೊ ಪುಯ್ಬ್ಲೊದ ಜೊಬಿ ಎಂಬಾತ ಎರಡು ಪವರ್‌ಬಾಲ್ ಬಹುಮಾನ ಗೆದ್ದಿದ್ದ. ಆದರೆ, ಲಾಕ್‌ಡೌನ್ ಕಾರಣದಿಂದ ಎರಡು ತಿಂಗಳ ನಂತರ ಅವರು ಬಹುಮಾನ ಪಡೆಯಲು ಸಾಧ್ಯವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...