alex Certify ಮೀನನ್ನು ವಾಕಿಂಗ್ ಗೆ ಕರೆದೊಯ್ದವನು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನನ್ನು ವಾಕಿಂಗ್ ಗೆ ಕರೆದೊಯ್ದವನು ಅರೆಸ್ಟ್

ಸ್ಪೇನ್: ನಾಯಿಯನ್ನು ವಾಕಿಂಗ್ ಕರೆದೊಯ್ಯುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮೀನನ್ನು ವಾಕಿಂಗ್ ಕರೆದೊಯ್ಯುತ್ತಿದ್ದನಂತೆ. ಅದರಲ್ಲೂ ಲಾಕ್‌ ‌ಡೌನ್ ಸಮಯದಲ್ಲಿ ಹೀಗೆ ಮಾಡಿದ್ದರಿಂದ ಇದೇ ಕಾರಣಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಸ್ಪೇನ್ ನ ಲಾಂಗ್ರೊನೊ ಎಂಬಲ್ಲಿ ಜನರು‌ ಹೊರ ಬರದಂತೆ ಬೆಲ್ ಬಾರಿಸಿದ ನಂತರವೂ ಬಾಟಲಿಯಲ್ಲಿ ಮೀನೊಂದನ್ನು ಹಾಕಿಕೊಂಡು ವಾಕಿಂಗ್ ತೆರಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೇನ್ ಪೊಲೀಸರು ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.‌

“ಇದು ಭೇದ ಭಾವದ ಕಾನೂನು. ನಾನು ನಾಯಿಯನ್ನು ವಾಕಿಂಗ್ ಕೊಂಡೊಯ್ಯಬಹುದು,‌ ಮೀನನ್ನು ಅಥವಾ ಹಂದಿಯನ್ನು ವಾಕಿಂಗ್ ಕೊಂಡೊಯ್ಯಲು‌ ಅವಕಾಶವಿಲ್ಲ” ಎಂದು ಒಬ್ಬ ಕಮೆಂಟ್ ಮಾಡಿದ್ದರೆ. “ಪೊಲೀಸರ ಕಾರ್ಯವನ್ನು ವಿಮರ್ಶಿಸಬೇಡಿ. ಅವರು ಕಾನೂನು ಪಾಲನೆ ಮಾಡುತ್ತಾರಷ್ಟೆ” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...