alex Certify ಹೆಚ್ಚಾಗ್ತಿದೆ ಎಚ್ -1ಬಿ ವೀಸಾ ಹೊಂದಿದವರ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಾಗ್ತಿದೆ ಎಚ್ -1ಬಿ ವೀಸಾ ಹೊಂದಿದವರ ಸಮಸ್ಯೆ

2 लाख से ज्यादा H-1B Visa होल्डरों की ...

ಎಚ್ -1 ಬಿ ವೀಸಾ ಮೂಲಕ ಅಮೆರಿಕಾದಲ್ಲಿ ಕೆಲಸ ಮಾಡ್ತಿರುವ ಭಾರತೀಯರ ತೊಂದರೆ ಹೆಚ್ಚಾಗುವ ಸಾಧ್ಯತೆಯಿದೆ.  ಈ ವೀಸಾ ಪಡೆದು ಅಮೆರಿಕದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನಲ್ಲಿ ಈ ಎಲ್ಲ ಭಾರತೀಯರನ್ನು ಸಂಬಳವಿಲ್ಲದೆ ರಜೆ ಮೇಲೆ ಕಳುಹಿಸಲಾಗಿದೆ. ಅಂತಹ ಭಾರತೀಯರ ತೊಂದರೆಗಳು ಹೆಚ್ಚಿವೆ.

ಕೋವಿಡ್ -19 ರ ಕಾರಣದಿಂದಾಗಿ ಮಾರ್ಚ್ ಮಧ್ಯದಿಂದಲೇ ನೌಕರರನ್ನು ರಜೆ ಮೇಲೆ ಕಳುಹಿಸಲಾಗಿದೆ. ರಜೆ ಮೇಲಿರುವ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಜೂನ್ ವರೆಗೆ ಯುಎಸ್ ನಲ್ಲಿ ಉಳಿಯಬಹುದು. ನಂತ್ರ ಅಲ್ಲಿರಲು ಸಾಧ್ಯವಿಲ್ಲ. ಭಾರತಕ್ಕೂ ವಾಪಸ್ ಬರಲು ಸಾಧ್ಯವಾಗ್ತಿಲ್ಲ.

ಕೆಲಸ ಕಳೆದುಕೊಂಡ ನಂತ್ರ 60 ದಿನಗಳ ಕಾಲ ಎಚ್ -1ಬಿ ವೀಸಾ ಮೂಲಕ ಅಮೆರಿಕಾದಲ್ಲಿರಬಹುದು. ಸಮಯ ಹೆಚ್ಚಾದ್ರೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಟ್ರಂಪ್ ಆಡಳಿತದ ಅವಧಿಯಲ್ಲಿ ವಲಸೆ ಮತ್ತು ವಿದೇಶಿ ಕಾರ್ಮಿಕರ ನಿಯಮಗಳು ಬಹಳ ಕಟ್ಟುನಿಟ್ಟಾಗಿವೆ. 2019 ರಲ್ಲಿ ವಲಸೆ ರಹಿತ ಕಾರ್ಮಿಕರಿಗೆ ನೀಡಲಾಗುವ ವೀಸಾಗಳಲ್ಲಿ ಇಳಿಕೆ ಕಂಡು ಬಂದಿದೆ. ಕೊರೊನಾ ಹಿನ್ನಲೆಯಲ್ಲಿ ಇನ್ನಷ್ಟು ನೌಕರರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುವು ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...