alex Certify ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..!

ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ.

​ ಟೆನ್ನೆಸ್ಸೀಯ ನ್ಯೂ ಟೆಜ್ವೆಲ್​​​ನಲ್ಲಿರುವ ತನ್ನ ಸುಡುತ್ತಿರುವ ಮನೆಯ ಕಿಟಕಿ ಮೂಲಕ ಹತ್ತಿದ ಎಲಿ ಡೇವಿಡ್​ಸನ್ ತನ್ನ 22 ತಿಂಗಳ ಸಹೋದರಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾದನು.

ಮಧ್ಯರಾತ್ರಿ ವೇಳೆ ಮನೆಯಲ್ಲಿ ಹೊಗೆ ತುಂಬಿಕೊಂಡಿದ್ದನ್ನ ಎಚ್ಚರಗೊಂಡ ಎಲಿ ಪೋಷಕರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಮನೆಯ ಹಾಲ್​ನಲ್ಲಿ ಸಿಕ್ಕಾಪಟ್ಟೆ ಹೊಗೆ ತುಂಬಿಕೊಂಡಿದ್ದರಿಂದ ಮಗಳು ಇದ್ದ ಕೋಣೆಯನ್ನ ಪ್ರವೇಶಿಸೋಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಕೂಡಲೇ ಬಾಲಕಿಯ ತಂದೆ ತನ್ನ 7 ವರ್ಷದ ಮಗನಿಗೆ ನೀನು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಲೇಬೇಕು ಎಂದು ಉತ್ತೇಜನ ನೀಡಿದ್ರು.

ಕೂಡಲೇ ಕಿಟಕಿ ಮೂಲಕ ತಂಗಿಯ ಕೋಣೆಯನ್ನ ಪ್ರವೇಶಿಸಿದ ಎಲಿ ಕೂಡಲೇ ಆಕೆಯನ್ನ ಬಚಾವ್​ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...