alex Certify ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ಮಳೆ, ಮೋಡ ಇರುವಾಗ ಸಿಡಿಲು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಅಪ್ಪಳಿಸಬಹುದು. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಮಳೆಯಿಲ್ಲದೇ, ನೀಲಾಕಾಶವಿರುವಾಗ ಸಿಡಿಲು ಹೊಡೆಯುವುದು ಎಂದರೆ…?

ಹೌದು ಅಚ್ಚರಿಯಾದರೂ ಇದು ಸತ್ಯ. ಫ್ಲೋರಿಡಾದ ತಂಪಾ ಪ್ರದೇಶದ ಜೊನಾಥನ್‌ ಮೋರೆ ಎನ್ನುವ ಸ್ಥಳದಲ್ಲಿರುವ ಮನೆಯ ಮುಂಭಾಗದಲ್ಲಿರುವ ಮರಕ್ಕೆ ಈ ರೀತಿ ಸಿಡಿಲು ಹೊಡೆದಿದೆ. ಈ ರೀತಿ ಮೋಡ ಇಲ್ಲದಿರುವಾಗ ಸಿಡಿಲು ಹೊಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ವಿಚಿತ್ರ ಹಾಗೂ ಅಚ್ಚರಿಯ ವಿಡಿಯೊ ಡ್ಯಾಶ್‌ಕ್ಯಾಮ್‌ನಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೊ ಭಾರಿ ವೈರಲ್‌ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಅಮೋಘ ದೃಶ್ಯಕ್ಕೆ ಅನೇಕರು ಶಹಬಾಸ್‌ಗಿರಿ ನೀಡಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...