alex Certify ಗಿಫ್ಟ್‌ ಬಾಕ್ಸ್‌ನಲ್ಲಿದ್ದ ಅಪ್ಪನ ಕಂಡು ಖುಷಿಯಾದ ಪುಟಾಣಿ ಕಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಫ್ಟ್‌ ಬಾಕ್ಸ್‌ನಲ್ಲಿದ್ದ ಅಪ್ಪನ ಕಂಡು ಖುಷಿಯಾದ ಪುಟಾಣಿ ಕಂದ

ಯೋಧರೊಬ್ಬರು ತಮ್ಮ ಮಗಳಿಗೆ ತಮ್ಮನ್ನೇ ಗಿಫ್ಟ್‌ ಆಗಿ ಪ್ರೆಸೆಂಟ್ ಮಾಡಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ಅಮೆರಿಕ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಟಿಮಾಟಿ ವ್ಹೈಟ್‌ ತಮ್ಮ ಸೇವೆಯಿಂದ ರಜೆ ಪಡೆದುಕೊಂಡು ಮನೆಗೆ ಮರಳಿದ್ದಾರೆ. ಈ ವೇಳೆ ತಮ್ಮ ಮಗಳು ಹಾರ್ಪರ್‌ಗೆ ಸರ್ಪ್ರೈಸ್‌ ಕೊಡಬೇಕೆಂದು ಗಿಫ್ಟ್‌ ಬಾಕ್ಸ್‌ ಒಳಗೆ ಸೇರಿಕೊಂಡಿದ್ದಾರೆ ಟಿಮಾಟಿ.

ಮಗಳನ್ನು ಈ ಗಿಫ್ಟ್ ಡಬ್ಬದ ಬಳಿ ಕರೆದುಕೊಂಡು ಬಂದ ಆಕೆಯ ತಾಯಿ, ದೊಡ್ಡ ಪ್ರೆಸೆಂಟ್‌ಅನ್ನು ತೆರೆದು ನೋಡಲು ಆಕೆಗೆ ತಿಳಿಸಿದ್ದಾರೆ.

ಗಿಫ್ಟ್‌ ಪೇಪರ್ ‌ಅನ್ನು ಹರಿಯುತ್ತಿದ್ದಂತೆ ಅದರೊಳಗಿದ್ದ ಅಪ್ಪನನ್ನು ಕಂಡು ಭಾರೀ ಖುಷಿಯಾಗಿದ್ದಾಳೆ ಹಾರ್ಪರ್‌.

ಅಪ್ಪ-ಮಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕಳೆದ ವರ್ಷದ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...