alex Certify ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..!

ಯುಎಇನ ಅಜ್ಮಾನ್​ ಎಮಿರೇಟ್​​ನಲ್ಲಿ ವಾಹನ ಆವರಣದಲ್ಲಿ ವಾಹನ ಪಾರ್ಕಿಂಗ್​ ಮಾಡುತ್ತಿದ್ದ ವೇಳೆ ಪತಿ ಆಕಸ್ಮಿಕವಾಗಿ ಪತ್ನಿಗೆ ಕಾರು ಗುದ್ದಿಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆ 45 ವರ್ಷದ ಭಾರತೀಯೆ ಎನ್ನಲಾಗಿದೆ.

ಲಿಜಿ ಮತ್ತಾಕೆಯ ಪತಿ ಶನಿವಾರ ಆಸ್ಪತ್ರೆಗೆ ತಪಾಸಣೆಗೆಂದು ತೆರಳಿದ್ದರು. ಲಿಜಿ ಕಾರಿನ ಮುಂದೆ ನಿಂತು ಅದನ್ನ ನಿಲ್ಲಿಸಲು ಗಂಡನಿಗೆ ನಿರ್ದೇಶನ ನೀಡುತ್ತಿದ್ದ ವೇಳೆ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಲಿಜಿ ಹಾಗೂ ಅವರ ಪತಿ ಇಬ್ಬರೂ ಕೇರಳ ಮೂಲದವರಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...