alex Certify ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್​ ಸಿಇಓ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್​ ಸಿಇಓ..!

ಅಮೆಜಾನ್​​ ಸಿಇಓ ಜೆಫ್​ ಬೆಜೋಸ್​ ತನ್ನ ಪ್ರೇಯಸಿಯ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೇ ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಭಂಗ ತರಲು ಯತ್ನಿಸಿದ ನನ್ನ ಪ್ರೇಯಸಿಯ ಸಹೋದರ ನನಗೆ 1.7 ಮಿಲಿಯನ್​ ಡಾಲರ್​ ಹಣವನ್ನ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೆಜೋಸ್​ ಹಾಗೂ ಅವರ ಪ್ರೇಯಸಿ ಲಾರೆನ್​ರ ಕೆಲ ವೈಯಕ್ತಿಕ ಫೋಟೋಗಳು ಲೀಕ್​ ಆಗಿದ್ದವು. ಇದಾದ ಬಳಿಕ ಬೆಜೋಸ್​​ ನನ್ನ ಖಾಸಗಿ ಫೋಟೋಗಳನ್ನ ಲಾರೆನ್ ಸಹೋದರನೇ ಲೀಕ್​ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನ ಮೈಕೆಲ್​ ಅಲ್ಲಗೆಳೆದಿದ್ದರು.

ಅಲ್ಲದೇ ಈ ವಿಚಾರವಾಗಿ ಆರೋಪ ಮಾಡಿದ್ದ ಮೈಕೆಲ್​, ಈ ಘಟನೆಯಿಂದ ನನ್ನ ಮರ್ಯಾದೆ ಹಾಳಾಗಿದೆ. ನಮ್ಮ ಮನೆಯ ಮುಂದೆ ಎಫ್​ಬಿಐ ವಿಚಾರಣೆ ನಡೆಸಿದೆ. ಇದರಿಂದ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಹಾಗೂ ಈ ಪ್ರಕರಣದಲ್ಲಿ ನನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳೂ ಸುಳ್ಳು ಎಂದು ಹೇಳಿದ್ದರು.

ಕಲಿಯುಗ ಅಂತ್ಯವಾಯ್ತು ಅಂತಾ ಮಕ್ಕಳನ್ನ ಕೊಂದಿದ್ದ ತಾಯಿ ಶವದ ಮುಂದೆಯೇ ಮಾಡಿದ್ದಳಂತೆ ನೃತ್ಯ…!

ಇತ್ತ ಜೆಫ್​ ಬೆಜೋಸ್​, ಏಂಜಲೀಸ್​ ಸುಪೀರಿಯರ್​​ ಕೋರ್ಟ್​ನಲ್ಲಿ ಮೈಕಲ್​ ವಿರುದ್ಧ 1.7 ಮಿಲಿಯನ್​ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಮಾತನಾಡಿದ ಅವ್ರು ಮೈಕೆಲ್​ ವೈಯಕ್ತಿಕ ಫೋಟೋಗಳನ್ನ ಲೀಕ್​ ಮಾಡುವ ಮೂಲಕ ನನಗೆ ಹಾಗೂ ಆತನ ಸಹೋದರಿಗೆ ಮುಖಭಂಗ ಮಾಡಿದ್ದಾರೆ. ಮೈಕೆಲ್​ ಈ ಎಲ್ಲಾ ಫೋಟೋಗಳನ್ನ ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೇ ನನಗೆ ಮೈಕೆಲ್ ಮಾನಸಿಕವಾಗಿಯೂ ಒತ್ತಡ ಹೇರಿದ್ದಾರೆ ಎಂದು ಹೇಳಿದ್ರು.

ಇನ್ನು ಈ ಮಾನನಷ್ಟ ಮೊಕದ್ದಮೆಯ ಸಂಬಂಧ ಪ್ರತಿಕ್ರಿಯಿಸಿರುವ ಮೈಕಲ್​ ಪರ ವಕೀಲ ಟಾಮ್​ ಬ್ಯಾರೇನ್​, ಬೆಜೋಸ್‌ನಶುಲ್ಕ ವಿನಂತಿಯು ಅನೇಕ ಹಂತಗಳಲ್ಲಿ ತೊಂದರೆ ನೀಡುತ್ತಿದೆ ಎಂದು ಹೇಳಿದ್ದಾರೆ. 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...