alex Certify ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿ…!

ತನ್ನ ಮುದ್ದಿನ ಮಡದಿಗೆಂದು ಚಂದ್ರನ ಅಂಗಳಲ್ಲಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿರುವ ಪಾಕಿಸ್ತಾನದ ರಾವಲ್ಪಿಂಡಿಯ ವ್ಯಕ್ತಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾನೆ.

ಶೋಯೆಬ್ ಅಹ್ಮದ್ ಹೆಸರಿನ ಈತ, ಅಂತಾರಾಷ್ಟ್ರೀಯ ಚಂದ್ರನ ಭೂದಾಖಲೆ ನೋಂದಣಿಗೆ (International Lunar Lands Registry) $45 ತೆತ್ತು ಈ ಜಾಗವನ್ನು ಖರೀದಿ ಮಾಡಿದ್ದಾನೆ.

ಬಾಲಿವುಡ್‌ನ ದಿವಂಗತ ನಟ ಸುಶಾಂತ್‌ ಸಿಂಗ್ ರಜಪೂತ್‌ರಿಂದ ತಮಗೆ ಈ ಜಮೀನು ಖರೀದಿ ಮಾಡಲು ಸ್ಪೂರ್ತಿ ಸಿಕ್ಕಿದ್ದಾಗಿ ಅಹ್ಮದ್ ಹೇಳಿಕೊಂಡಿದ್ದಾರೆ. ಚಂದ್ರನ ಮೇಲೆ ’ಮೇರ್‌ ಮುಸ್ಕೋವಿನ್ಸ್‌’ ಹೆಸರಿನ ಜಾಗವೊಂದನ್ನು 2018ರಲ್ಲಿ ಸುಶಾಂತ್‌ ಖರೀದಿ ಮಾಡಿದ್ದರು.

ಟಾಮ್ ಕ್ರೂಯ್ಸ್‌ ಹಾಗೂ ಶಾರುಖ್‌ ಖಾನ್‌ರಂಥ ದೊಡ್ಡ ಸೆಲೆಬ್ರಿಟಿಗಳು ಚಂದ್ರನ ಅಂಗಳಲ್ಲಿ ತಂತಮ್ಮ ಜಾಗಗಳನ್ನು ಖರೀದಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...