alex Certify ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ ಅಪಾರ್ಟ್​ಮೆಂಟ್​ನಲ್ಲಿರುವ ಮನೆಯ ಸೌಕರ್ಯ ಇನ್ನೆಷ್ಟು ಚೆನ್ನಾಗಿ ಇರಬೇಡ ಹೇಳಿ..? ಆದರೆ ನ್ಯೂಯಾರ್ಕ್​ ಐಷಾರಾಮಿ ಮನೆಯೊಂದರಲ್ಲಿ ಅಡುಗೆ ಮನೆಯಾಗಲಿ, ಸ್ನಾನ ಗೃಹವಾಗಲಿ ಇಲ್ಲವೇ ಇಲ್ಲ..!

ಟಿಕ್​ಟಾಕ್​ನಲ್ಲಿ ಇಂತಹ ಒಂದು ವಿಚಿತ್ರ ಅಪಾರ್ಟ್​ಮೆಂಟ್​ ಮನೆಯ ವಿಡಿಯೋವೊಂದು ವೈರಲ್​ ಆಗಿದ್ದು ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಮನೆಯ ವಿಡಿಯೋ ಪೋಸ್ಟ್ ಮಾಡಿರುವ ಬಳಕೆದಾರರು ಅತ್ಯಂತ ಕೆಟ್ಟ ಅಪಾರ್ಟ್​ಮೆಂಟ್​ ಅಂತಾ ಶೀರ್ಷಿಕೆ ನೀಡಿದ್ದಾರೆ.

ಪ್ರೀತಿ ನಿರಾಕರಿಸಿದಾಕೆಯ ಮೇಲಿನ ಸಿಟ್ಟಿಗೆ ಪ್ರಿಯತಮ ಮಾಡ್ದ ಇಂಥಾ ಕೆಲಸ

ವಿಡಿಯೋದಲ್ಲಿ ತೋರಿಸಲಾದ ಮನೆಯಲ್ಲಿ ಒಂದು ಕೋಣೆಯಿದೆ. ಅದರಲ್ಲಿ ಸ್ನಾನಗೃಹವಾಗಲಿ, ಶೌಚಾಲಯವಾಗಲಿ, ಒಲೆ, ಫ್ರಿಡ್ಜ್​ ಹೀಗೆ ಯಾವುದೇ ಗೃಹೋಪಯೋಗಿ ಸಲಕರಣೆಗಳು ಕಂಡು ಬರೋದಿಲ್ಲ. ಅಂದಹಾಗೆ ಈ ಮನೆಯ ಬಾಡಿಗೆ ತಿಂಗಳಿಗೆ ಬರೋಬ್ಬರಿ 1,20,292.43 ರೂಪಾಯಿಗಳೆಂದು ಟಿಕ್​ ಟಾಕ್​ ಬಳಕೆದಾರ ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...