alex Certify ಬಾತ್ ರೂಮಲ್ಲಿ ಅಪ್ಪಿತಪ್ಪಿಯೂ ಇಡಬೇಡಿ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್ ರೂಮಲ್ಲಿ ಅಪ್ಪಿತಪ್ಪಿಯೂ ಇಡಬೇಡಿ ಈ ವಸ್ತು

ಕೆಲವರು ತಮ್ಮ ಅಗತ್ಯತೆಗಳಿಗಾಗಿಯೋ, ಶೋಕಿಗಾಗಿಯೋ ಅಥವಾ ಇನ್ನೊಬ್ಬರನ್ನು ಅನುಸರಿಸಿಯೋ ಹಲವು ವಸ್ತುಗಳನ್ನು ಬಾತ್ ರೂಮಿನಲ್ಲಿ ಇಡುತ್ತಾರೆ. ಇಂತಹ ಕೆಲವು ಅಭ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ ಎಂಬುದು ಅವರಿಗೆ ತಿಳಿಯುವುದಿಲ್ಲ.

ಬಾತ್ ರೂಮಿನಲ್ಲಿ ಎಲೆಕ್ಟ್ರಾನಿಕ್ ಐಟಮ್, ಪೇಪರ್, ಮೇಕಪ್ ಸಾಮಾನುಗಳನ್ನು ಇಡಬಾರದು. ಅವು ಹಾಳಾಗುವುದಲ್ಲದೇ ಅವುಗಳಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ನಮಗೆ ಹಾನಿಯುಂಟು ಮಾಡುತ್ತವೆ.

ಸ್ನಾನದ ಕೋಣೆಯಲ್ಲಿ ಓದುವ ಹವ್ಯಾಸ ಕೆಲವರಿಗೆ ಇರುತ್ತದೆ. ಅಂತವರು ಬಾತ್ ರೂಮಿನಲ್ಲಿ ಪುಸ್ತಕಗಳನ್ನು ಇಟ್ಟಿರುತ್ತಾರೆ. ತೇವದಿಂದ ಪುಸ್ತಕ ಹಾಳಾಗುತ್ತದೆ. ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.

ಅನೇಕರು, ಮೇಕಪ್ ಸಾಮಾನುಗಳನ್ನು ಬಾತ್ ರೂಮಿನ ಕ್ಯಾಬಿನೆಟ್ ನಲ್ಲಿ ಇಡುತ್ತಾರೆ. ತಜ್ಞರು ಹೇಳುವ ಪ್ರಕಾರ ಇದರಿಂದಲೂ ಮೇಕಪ್ ಸಾಮಗ್ರಿಗಳು ತೇವಗೊಂಡು ಹಾಳಾಗುತ್ತವೆ. ಚರ್ಮದ ಮೇಲೂ ಪ್ರಭಾವ ಬೀರುತ್ತದೆ.

ಸ್ನಾನದ ಕೋಣೆಯಲ್ಲಿ ಟವೆಲ್ ಮತ್ತು ಬಟ್ಟೆಗಳು ಅತೀ ಅವಶ್ಯಕವಂತೂ ನಿಜ. ಆದರೆ ಕೆಲವರು ಒದ್ದೆ ಬಟ್ಟೆಯನ್ನು ಬಾತ್ ರೂಮಿನಲ್ಲಿಯೇ ಇಡುತ್ತಾರೆ. ಹೀಗೆ ಮಾಡುವುದರಿಂದ ಬಟ್ಟೆ ಸರಿಯಾಗಿ ಒಣಗದೇ ಅಂತಹ ಬಟ್ಟೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.

ಬಾತ್ ರೂಮಿನಲ್ಲಿ ಮಾತ್ರೆಗಳನ್ನು ಇಡುವುದು ತಪ್ಪು. ಇದರಿಂದ ಮಾತ್ರೆ ತೇವವನ್ನು ಹೀರಿಕೊಂಡು ಹಾಳಾಗುತ್ತವೆ. ಹಾಗಾಗಿ ಔಷಧ ಅಥವಾ ಮಾತ್ರೆಗಳನ್ನು ಯಾವಾಗಲೂ ಸುರಕ್ಷಿತ ಜಾಗದಲ್ಲಿ ಇಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...