alex Certify ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’

ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್‌ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ.

ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ ಗುಪ್ತಾ, ‘Bhangracise’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಆ ಮೂಲಕ ಪಂಜಾಬೀ ನೃತ್ಯವನ್ನು ಜನರಿಗೆ ಕಲಿಸುತ್ತಾ ಬಂದಿದ್ದಾರೆ. ತಮ್ಮ ಈ ಕೆಲಸವನ್ನು ಅವರು ಕಳೆದ 15 ವರ್ಷಗಳಿಂದ ಮ್ಯಾಂಚೆಸ್ಟರ್‌ನಲ್ಲಿ ಮಾಡುತ್ತಾ ಬಂದಿದ್ದಾರೆ.

2019ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಪಂದ್ಯ ನಡೆದ ವೇಳೆ ಇದೇ ಭ್ರಾಂಗ್ರಾಚೈಸ್ ತಂಡವು ಕ್ರೀಡಾಂಗಣದಲ್ಲಿ ನೃತ್ಯ ಮಾಡಿತ್ತು. ಇದೇ ತಂಡವು 2012ರ ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲೂ ಸಹ ಪ್ರದರ್ಶನ ನೀಡಿತ್ತು.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರೆಲ್ಲಾ ಮನೆಗಳಲ್ಲಿ ಲಾಕ್‌ಡೌನ್‌ ಆಗಿರುವ ವೇಳೆ, ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದನ್ನು ಹೇಳಿಕೊಡುತ್ತಿದೆ ಭಾಂಗ್ರಾಚೈಸ್. ಈ ಮೂಲಕ ಜನರಿಗೆ ಕೇವಲ ಫಿಟ್ನೆಸ್ ಮಾತ್ರವಲ್ಲದೇ, ಪಾಸಿಟಿವ್‌ ಮನಸ್ಥಿತಿಗಳನ್ನು ಕಾಪಾಡಿಕೊಳ್ಳಲು ಸಹ ನೆರವಾಗುತ್ತಿದ್ದಾರೆ ಗುಪ್ತಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...