alex Certify ಭಾರತದಿಂದ ಕೊರೊನಾ ಲಸಿಕೆ ಪಡೆಯಲು ಹೊಸ ಮಾರ್ಗ ಹುಡುಕುತ್ತಿದೆ ಪಾಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಿಂದ ಕೊರೊನಾ ಲಸಿಕೆ ಪಡೆಯಲು ಹೊಸ ಮಾರ್ಗ ಹುಡುಕುತ್ತಿದೆ ಪಾಕ್..!

ಭಾರತ, ಬಾಂಗ್ಲಾ ದೇಶಕ್ಕೆ 20 ಲಕ್ಷ ಡೋಸ್​ ಕೋವಿಡ್​ ಲಸಿಕೆಗಳನ್ನ ಕಳುಹಿಸೋಕೆ ಯೋಜನೆಯನ್ನ ರೂಪಿಸುತ್ತಿದ್ದರೆ ಇತ್ತ ಪಾಕಿಸ್ತಾನ ಭಾರತದಲ್ಲಿ ತಯಾರಾಗಿರುವ ಕೊರೊನಾ ಲಸಿಕೆಗಳನ್ನ ಜಾಗತಿಕ ಮೈತ್ರಿ ಮೂಲಕ ಇಲ್ಲವೇ ದ್ವಿಪಕ್ಷೀಯ ಮಾತುಕತೆ ಮೂಲಕ ಪಡೆಯಲು ಮಾರ್ಗಗಳನ್ನ ಹುಡುಕುತ್ತಿದೆ.

ಸೋಮವಾರ ಈ ವಿಚಾರವಾಗಿ ಹೇಳಿಕೆ ನೀಡಿದ್ದ ಬಾಂಗ್ಲಾ ದೇಶದ ಅಧಿಕಾರಿಗಳು ಜನವರಿ 20ರಂದು ವಿಶೇಷ ವಿಮಾನದ ಮೂಲಕ ಭಾರತದಲ್ಲಿ ಸೀರಮ್​ ಇನ್ಸ್​​ಟಿಟ್ಯೂಟ್​ ತಯಾರಿಸಿದ ಆಕ್ಸ್​ಫರ್ಡ್​ – ಆಸ್ಟ್ರೇಜೆನಿಕಾದ ಕೋವಿಶೀಲ್ಡ್ ಲಸಿಕೆಗಳನ್ನ ಡಾಕಾಗೆ ತರಿಸಲಿದೆ. ಈ ಲಸಿಕೆಗಳನ್ನ ಢಾಕಾದಲ್ಲಿರುವ ಭಾರತೀಯ ಹೈ ಕಮಿಷನ್​ ಬಾಂಗ್ಲಾ ಸರ್ಕಾರಕ್ಕೆ ಹಸ್ತಾಂತರ ಮಾಡಲಿದೆ. ಬಾಂಗ್ಲಾದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈವರೆಗೆ ಸರಿ ಸುಮಾರು 7,900 ಮಂದಿ ಸಾವನ್ನಪ್ಪಿದ್ದಾರೆ.

ಇತ್ತ ಪಾಕಿಸ್ತಾನ ಕೂಡ ಭಾರತದಿಂದ ಲಸಿಕೆಗಳನ್ನ ಪಡೆಯೋಕೆ ಹೊಸ ಮಾರ್ಗಗಳನ್ನ ಅನ್ವೇಷಣೆ ಮಾಡುತ್ತಿದೆ. ಪಾಕಿಸ್ತಾನದ ಡ್ರಗ್​ ರೆಗ್ಯೂಲೇಟರಿ ಅಥಾರಿಟಿ ಆಕ್ಸ್​ಫರ್ಡ್​ – ಆಸ್ಟ್ರೆಜೆನಿಕಾದ ಕೋವಿಶೀಲ್ಡ್ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದೆ. ಪಾಕಿಸ್ತಾನದಲ್ಲಿ ಒಟ್ಟು 5 ಲಕ್ಷಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾಗಿದ್ದು ಈವರೆಗೆ 11 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

ಜಿಎವಿಐ, ಸಿಇಪಿಐ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಒಂದಾಗಿ ಸ್ಥಾಪಿಸಿದ ಕೋವಾಕ್ಸ್ ಮೂಲಕ ಲಸಿಕೆಗಳನ್ನ ಪಡೆಯೋಕೆ ಇಸ್ಲಾಮಾಬಾದ್​​ನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೈತ್ರಿಕೂಟವು ಪಾಕ್​ ಸೇರಿದಂತೆ ಸುಮಾರು 190 ದೇಶಗಳಿಗೆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 20ರಷ್ಟು ಮಂದಿಗೆ ಉಚಿತ ಲಸಿಕೆಗಳನ್ನ ನೀಡೋದಾಗಿ ಭರವಸೆ ನೀಡಿತ್ತು. ಹೀಗಾಗಿ 2021 ಎರಡನೇ ತ್ರೈಮಾಸಿಕದ ಆರಂಭದಲ್ಲಿ ಕೋವಾಕ್ಸ್​ನಿಂದ ಮೊದಲ ರವಾನೆಯನ್ನ ಪಡೆಯೋಕೆ ಪಾಕ್​ ಪ್ಲಾನ್​ ಮಾಡ್ತಿದೆ.

ದೇಶದ ಉಳಿದ ಜನಸಂಖ್ಯೆಗೆ ಆಕ್ಸ್​ಫರ್ಡ್​ – ಆಸ್ಟ್ರೆಜೆನಿಕಾ ಲಸಿಕೆ ಹಾಗೂ ಭಾರತ್​ ಬಯೋಟೆಕ್​​ ಕೋವ್ಯಾಕ್ಸಿನ್​ನ್ನೂ ದ್ವಿಪಕ್ಷೀಯ ವ್ಯವಸ್ಥೆ ಮೂಲಕ ಸಂಗ್ರಹಿಸಲು ಪಾಕ್​​ ಮುಂದಾಗಿದೆ. ಇಲ್ಲವೇ ಮೂರನೇ ದೇಶದ ಸಹಾಯವನ್ನ ಪಡೆದು ಪಾಕ್​ ಭಾರತದಿಂದ ಲಸಿಕೆ ಖರೀದಿ ಮಾಡಬಹುದಾಗಿದೆ.

ಭಾರತ ಹಾಗೂ ಪಾಕ್​ ನಡುವಿನ ವೈಮನಸ್ಯ ದ್ವಿಪಕ್ಷೀಯ ವ್ಯಾಪಾರವನ್ನ ಸ್ಥಗಿತಗೊಳಿಸಲಾಗಿದೆ. ಆದರೆ ಜೀವ ಉಳಿಸುವ ಸಂಜೀವಿನಿಗಳಾಗಿರುವ ಲಸಿಕೆಗಳ ಪೂರೈಕೆ ವಿಚಾರದಲ್ಲಿ ಈ ನಿರ್ಬಂಧಗಳನ್ನ ಸಡಿಲಗೊಳಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...