alex Certify ಅಮೆರಿಕ ಕ್ಯಾಪಿಟಲ್​ ಹಿಂಸಾಚಾರವನ್ನ ಸಂಭ್ರಮಿಸಿದ್ರಾ ಟ್ರಂಪ್​..?‌ ವಿಡಿಯೋ ಬಿಚ್ಚಿಟ್ಟ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಕ್ಯಾಪಿಟಲ್​ ಹಿಂಸಾಚಾರವನ್ನ ಸಂಭ್ರಮಿಸಿದ್ರಾ ಟ್ರಂಪ್​..?‌ ವಿಡಿಯೋ ಬಿಚ್ಚಿಟ್ಟ ಸತ್ಯ

ಅಮೆರಿಕ ಕ್ಯಾಪಿಟಲ್​ಗೆ ಮುತ್ತಿಗೆ ಹಾಕಿದ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟ ಘಟನೆ ಜಗಜ್ಜಾಹೀರವಾಗಿದೆ. ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸುವ ಈ ಹಿಂಸಾಚಾರ ನಡೆಯುವ ಕೆಲವೇ ಗಂಟೆಗೂ ಮುನ್ನ ಡೊನಾಲ್ಡ್ ಟ್ರಂಪ್​, ಅವರ ಪುತ್ರಿ ಇವಾಂಕಾ ಟ್ರಂಪ್​, ಪುತ್ರ ಟ್ರಂಪ್​ ಜೂನಿಯರ್​ ಸೇರಿದಂತೆ ಕೆಲ ಟ್ರಂಪ್​ ಆಪ್ತರು ಪಾರ್ಟಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಾನ್​ ಜ್ಯೂನಿಯರ್​ ಮೊಬೈಲ್​ ಫೋನ್​ನಲ್ಲಿ ಚಿತ್ರಿಕರಿಸಲಾದ ಈ ವಿಡಿಯೋ ಟ್ರಂಪ್ ಭಾಷಣಕ್ಕೂ ಮುನ್ನ ಸೆರೆ ಹಿಡಿದಿದ್ದೋ ಇಲ್ಲವೇ ನಂತರದಲ್ಲೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಡೊನಾಲ್ಡ್​ ಟ್ರಂಪ್​ ಭಾಷಣ ಮಾಡಿದ ಕೆಲವೇ ಗಂಟೆಗಳ ಬಳಿಕ ಕ್ಯಾಪಿಟಲ್​ ಮೇಲೆ ಟ್ರಂಪ್​ ಬೆಂಬಲಿಗರು ದಾಳಿ ನಡೆಸಿದ್ದರು. ಟ್ರಂಪ್​ಗಿಂತ ಏಳು ಮಿಲಿಯನ್​ ಅಧಿಕ ಮತ ಗಳಿಸಿರುವ ಜೋ ಬಿಡೆನ್​ರನ್ನ ಅಧಿಕೃತವಾಗಿ ಕಾಂಗ್ರೆಸ್​​ ಘೋಷಣೆ ಮಾಡುವ ಮುನ್ನ ಈ ಹಿಂಸಾಚಾರ ನಡೆದಿದೆ.

ಟ್ರಂಪ್​ ಜ್ಯೂನಿಯರ್​​ ಅದ್ಭುತ ದೇಶಭಕ್ತರಿಗೆ ಧನ್ಯವಾದ ಎಂದು ಹೇಳುವ ಮೂಲಕ ವಿಡಿಯೋ ಆರಂಭವಾಗುತ್ತೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನ ದೇಶಭಕ್ತರು ಎಂದು ಕರೆಯುವ ಮೂಲಕ ಈ ಹಿಂದೆ ಇವಾಂಕಾ ಭಾರೀ ವಿರೋಧವನ್ನ ಎದುರಿಸಿದ್ದರು. ಬಳಿಕ ಅವರು ತಮ್ಮ ಟ್ವೀಟ್​ನ್ನೇ ಅಳಿಸಿಹಾಕಿದ್ದರು. ಈಗಲೂ ಕೂಡ ಈ ವಿಡಿಯೋ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

— Randi Mayem Singer (@rmayemsinger) January 7, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...