alex Certify ಟ್ರಂಪ್, ಜೋ ಬಿಡೆನ್ ಇಟಲಿ ಭೇಟಿ ವೇಳೆ ಮಹಿಳೆ ನೀಡಿದ್ದ ಪ್ರತಿಕ್ರಿಯೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್, ಜೋ ಬಿಡೆನ್ ಇಟಲಿ ಭೇಟಿ ವೇಳೆ ಮಹಿಳೆ ನೀಡಿದ್ದ ಪ್ರತಿಕ್ರಿಯೆ ವಿಡಿಯೋ ವೈರಲ್

ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳ ತಮಾಷೆಯ ಫೋಟೋ, ವಿಡಿಯೋಗಳು ಆಗಾಗ್ಗೆ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತವೆ. ಕೆಲವೊಂದು  ಟ್ರೋಲ್ ಗಳಿಗೆ ಒಳಗಾಗುತ್ತವೆ. ಹಾಗೆಯೇ ಸದ್ಯ, ಇಲ್ಲೊಂದು ವಿಡಿಯೋ ವೈರಲ್ ಆಗಿದೆ.

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಸ್ತುತ ಯುಎಸ್ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರ ವ್ಯಾಟಿಕನ್ ಭೇಟಿಯ ವಿಡಿಯೋವೊಂದು ವೈರಲ್ ಆಗಿದೆ. ಇಟಲಿಯ ಟ್ರಾನ್ಸ್ಲೇಟರ್ ಮಹಿಳೆಯೊಬ್ಬರು ಟ್ರಂಪ್ ಭೇಟಿ ವೇಳೆ ನೀಡಿದ್ದ ನೋಟ ಹಾಗೂ ಜೋ ಬಿಡೆನ್ ವೇಳೆ ನೀಡಿರುವ ಪ್ರತಿಕ್ರಿಯೆ ಕಂಡು ನೆಟ್ಟಿಗರು ನಕ್ಕಿದ್ದಾರೆ.

ಪ್ರಸ್ತುತ ಅಧ್ಯಕ್ಷ ಜೋ ಬಿಡೆನ್ ಹಾಗೂ ಈ ಹಿಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಟಿಕನ್‌ಗೆ ಭೇಟಿ ನೀಡಿದಾಗ ಅವರು ಭಾಗವಹಿಸಿದ್ದ ಸಭೆಯನ್ನು ಹೋಲಿಸಲಾಗಿದೆ. ಟ್ರಂಪ್ ಭೇಟಿ ವೇಳೆ ಅವರ ಹಿಂದೆ ಕುಳಿತಿದ್ದ ಮಹಿಳೆಯು ಮಾಜಿ ಅಮೆರಿಕ ಅಧ್ಯಕ್ಷರನ್ನು ದುರುಗುಟ್ಟಿ ನೋಡಿದ್ದಾರೆ. ಅದೇ ಇತ್ತೀಚೆಗೆ ವ್ಯಾಟಿಕನ್ ಭೇಟಿ ನೀಡಿದ್ದ ಜೋ ಬಿಡೆನ್ ಜೊತೆ ನಗುತ್ತಾ ಮಾತನಾಡಿದ್ದಾರೆ.

ಈ ಎರಡು ವ್ಯತಿರಿಕ್ತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದು, ಸದ್ಯ ವೈರಲ್ ಆಗಿದೆ. ಮಹಿಳೆಯ ವರ್ತನೆಗೆ ನೆಟ್ಟಿಗರು ನಗು ಬೀರಿದ್ದಾರೆ.

— The Recount (@therecount) October 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...