alex Certify BIG NEWS: ಕೊರೋನಾ ತಡೆಗೆ ಡೊನಾಲ್ಡ್ ಟ್ರಂಪ್ ಗೆ ನೀಡಿದ್ದ ಆಂಟಿಬಾಡಿ ಕಾಕ್ಟೇಲ್ ಭಾರತದಲ್ಲಿ ಲಭ್ಯ, ಬೆಲೆ 59,750 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ತಡೆಗೆ ಡೊನಾಲ್ಡ್ ಟ್ರಂಪ್ ಗೆ ನೀಡಿದ್ದ ಆಂಟಿಬಾಡಿ ಕಾಕ್ಟೇಲ್ ಭಾರತದಲ್ಲಿ ಲಭ್ಯ, ಬೆಲೆ 59,750 ರೂ.

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಡ್ರಗ್ ಪ್ರಮುಖ ರೋಚಿ ಇಂಡಿಯಾ ತನ್ನ ಮೊದಲ ಬ್ಯಾಚ್ ಆಂಟಿಬಾಡಿ ಕಾಕ್ಟೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಆಂಟಿ ಬಾಡಿ ಕಾಕ್ ಟೇಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಪ್ರತಿ ಡೋಸ್ ಗೆ 59,750 ರೂಪಾಯಿ ದರ ಇದೆ. ಇದನ್ನು ಸಿಪ್ಲಾ ಕಂಪನಿ ದೇಶದಲ್ಲಿ ಮಾರಾಟ ಮಾಡಲಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ರೋಚಿ ಪ್ರತಿಕಾಯ ಕಾಕ್ ಟೇಲ್ ಅನ್ನು ತಯಾರಿಸಿದ್ದು ಆಗಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ನೀಡಲಾಗಿತ್ತು.

ಆಂಟಿ ಬಾಡಿ ಕಾಕ್ಟೇಲ್ ನ ಮೊದಲ ಬ್ಯಾಚ್ ಈಗ ಭಾರತದಲ್ಲಿ ಲಭ್ಯವಿದೆ. ಎರಡನೇ ಬ್ಯಾಚ್ ಜೂನ್ ಗೆ ಸಿಗಲಿದೆ. ಒಟ್ಟಾರೆ 1 ಲಕ್ಷ ಪ್ಯಾಕ್ ಗಳಲ್ಲಿ ಎರಡು ಲಕ್ಷ ರೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಸಿಪ್ಲಾ ಮತ್ತು ರೋಚಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ರೋಗಿ ಒಂದು ಡೋಸ್ ಗೆ ಬೆಲೆ ಎಲ್ಲ ತೆರಿಗೆಗಳನ್ನು ಒಳಗೊಂಡಂತೆ 59,750 ರೂಪಾಯಿ ಇದೆ. ಮಲ್ಟಿ ಡೋಸ್ ಪ್ಯಾಕ್‌ನ ಗರಿಷ್ಠ ಚಿಲ್ಲರೆ ಬೆಲೆ (ಪ್ರತಿ ಪ್ಯಾಕ್ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲದು) ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 1,19,500 ರೂ. ಇದೆ.

ಭಾರತದ ಪ್ರಮುಖ ಆಸ್ಪತ್ರೆಗಳು ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳ ಮೂಲಕ ಔಷಧ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. ಕಾಕ್ ಟೇಲ್ ಔಷಧವು ರೋಗಿಗಳ ಸ್ಥಿತಿ ಹದಗೆಡುವ ಮೊದಲು ಸಹಾಯ ಮಾಡುತ್ತದೆ. ಆಸ್ಪತ್ರೆಗೆ ದಾಖಲಾದವರ ಮಾರಣಾಂತಿಕ ಅಪಾಯವನ್ನು ಕಡಿಮೆ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...