alex Certify ಕಸದ ಚೀಲದಲ್ಲಿ ಖುಲಾಯಿಸಿತ್ತು ಅದೃಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸದ ಚೀಲದಲ್ಲಿ ಖುಲಾಯಿಸಿತ್ತು ಅದೃಷ್ಟ..!

ಅದೃಷ್ಟ ಯಾವಾಗ ಮತ್ತು ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಬರಲ್ಲ. ಇಂಗ್ಲೆಂಡ್​ನಲ್ಲೂ ಕೂಡ ದಂಪತಿಗೆ ಕಸದ ಚೀಲದಲ್ಲಿ ಅದೃಷ್ಟ ಖುಲಾಯಿಸಿದೆ.

ಕಸದ ಚೀಲದಲ್ಲಿ ಸ್ಟಾರ್​ ವಾರ್ಸ್ ಪ್ರತಿಮೆ ಹಾಗೂ ಆಟಿಕೆ ಸಾಮಗ್ರಿಗಳಿದ್ದು ಇವುಗಳ ಒಟ್ಟು ಬೆಲೆ ಸರಿಸುಮಾರು 3,89,36,279.24 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಆಟಿಕೆಗಳು ಹಳೆಯದಿವೆ ಅಂತಾ ದಂಪತಿ ಹೇಳಿದ್ದಾರೆ. ಆಟಿಕೆಯ ಜೊತೆಯಲ್ಲಿ ರಿಟರ್ನ್​ ಆಫ್​ ದ ಜೇಡಿ : ಸ್ಟಾರ್ಮ್ ಟ್ರೂಪರ್​ನ ಹೆಲ್ಮೆಟ್​​ ಕೂಡ ಇದೆ.

ಈ ಆಟಿಕೆಗಳಿಂದ ಏನು ಮಾಡಬೇಕು ಅನ್ನೋದನ್ನ ತಿಳಿಯದ ಸ್ಟೌರ್ಬಿಡ್ಜ್​ ದಂಪತಿ ತಮ್ಮ ಮಗನ ಬಳಿ ಇವುಗಳನ್ನ ಹರಾಜಿಗಿಡೋಣ ಎಂದು ಹೇಳಿದ್ದಾರೆ. ಕೂಡಲೇ ಪುತ್ರ, ಹರಾಜುಗಾರ ಕ್ರಿಸ್​ ಆಸ್ಟನ್​ ಎಂಬವರಿಗೆ ಮಾಹಿತಿ ನೀಡಿದ್ದಾನೆ. ಇಂತಹ ಸ್ಟಾರ್​ ವಾರ್ಸ್ ಸಂಗ್ರಹವನ್ನ ನಾನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ ಅಂತಾ ಕ್ರಿಸ್​ ಆಸ್ಟನ್​ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...