alex Certify ಇಂಡಿಯಾ ಗೇಟ್​ ಸುತ್ತಲೂ ಕಸದ ರಾಶಿ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಯಾ ಗೇಟ್​ ಸುತ್ತಲೂ ಕಸದ ರಾಶಿ; ವಿಡಿಯೋ ವೈರಲ್

ಒಡಿಶಾದ ಹೆಸರಾಂತ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ಅವರು ತಮ್ಮ ದೆಹಲಿ ಭೇಟಿಯ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪಟ್ನಾಯಕ್​ ಪೋಸ್ಟ್​ ಮಾಡಿರುವ ವಿಡಿಯೋ ನೆಟ್ಟಿಗರಲ್ಲಿ ಕಳವಳ ತಂದಿದೆ. ಆ ಕ್ಲಿಪ್​ ಇಂಡಿಯಾ ಗೇಟ್​ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ತೋರಿಸುತ್ತದೆ. ಪಟ್ನಾಯಕ್​ ಸೆರೆ‌ ಹಿಡಿದಿರುವ ಪ್ಲಾಸ್ಟಿಕ್​ ಮಾಲಿನ್ಯ ಶಾಕ್​ ಆಗುತ್ತದೆ.

ಹೊಸ ದೆಹಲಿ-ಇಂಡಿಯಾ ಗೇಟ್​ನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳ ಚಿತ್ರೀಕರಣದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮುಂದುವರೆದಂತೆ, ಸ್ಮಾರಕದ ಸುತ್ತಲಿನ ರಸ್ತೆಯನ್ನು ತೋರಿಸಲಾಗುತ್ತದೆ. ದೇಶದ ಹುತಾತ್ಮರಿಗೆ ಸಮರ್ಪಿತವಾಗಿರುವ ಇಂಡಿಯಾ ಗೇಟ್​ನ ಮುಂಭಾಗದ ದಾರಿಯ ಬದಿಯಲ್ಲಿ ಪ್ಲಾಸ್ಟಿಕ್​ ಬ್ಯಾಗ್​, ಕಪ್​ಗಳು, ಬಾಟಲಿಗಳು ಮತ್ತು ಸಾಕಷ್ಟು ಕಸದ ರಾಶಿಯನ್ನು ಕಾಣಬಹುದು.

ಇಂದು ದೆಹಲಿಯ ಇಂಡಿಯಾ ಗೇಟ್​ಗೆ ಭೇಟಿ ನೀಡಲು ಸಂತೋಷವಾಯಿತು. ಆದರೆ ಸುತ್ತಲೂ ಬಿದ್ದಿರುವ ಕಸವನ್ನು ನೋಡಿ ನಿರಾಶೆಯಾಯಿತು. ದಯವಿಟ್ಟು ಕ್ರಮ ಕೆೈಗೊಳ್ಳಲು ಅಧಿಕಾರಿಗಳನ್ನು ವಿನಂತಿಸಿರುವ ಅವರು ನಮ್ಮ ನಗರಗಳನ್ನು ವಿಶೇಷವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ತಾಣಗಳನ್ನು ಸ್ವಚ್ಛವಾಗಿಡಲು ಜನರಿಗೆ ಮನವಿ ಮಾಡಿ. ಎಂದು ಪಟ್ನಾಯಕ್​ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...