alex Certify ಮಾಜಿ ಪತಿ ತಂದೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತಿ ತಂದೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತೆ. ಕೆಲವರ ಜೀವನದಲ್ಲಿ ಮದುವೆ ಅನ್ನೋದು ನಂಬಲಾರದ ಟ್ವಿಸ್ಟ್​ನ್ನು ನೀಡಿಬಿಡುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬಳು ತನ್ನ ಮಾಜಿ ಪತಿಯ ಮಲತಂದೆಯನ್ನ ವಿವಾಹವಾಗಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಶಾಕ್​ ಆಗಿದ್ದಾರೆ.

ಎರ್ರಿಕಾ ಕ್ವಿಗಲ್​ ಎಂಬ 31 ವರ್ಷದ ಮಹಿಳೆ 60 ವರ್ಷದ ಜೆಫ್​ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಜೆಫ್​ರ ಮಲಪುತ್ರಿಯ ಸ್ನೇಹಿತೆಯಾಗಿದ್ದ ಎರ್ರಿಕಾಳನ್ನ ಆಕೆ 16 ವರ್ಷದವಳಾದಾಗಿನಿಂದ ಜೆಫ್​ ನೋಡುತ್ತಿದ್ದಾರೆ.

ಈಕೆ ಮೊದಲು ಜೆಫ್​ರ ಮಲಮಗ ಜಸ್ಟಿನ್​​ರನ್ನು ಪ್ರೀತಿಸಿದ್ದಳು ಹಾಗೂ ಮದುವೆ ಕೂಡ ಆಗಿದ್ದಳು. ಆದರೆ ಸಮಯ ಕಳೆದಂತೆ ಇವರ ದಾಂಪತ್ಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಮೂಡಿದ್ದರಿಂದ ವಿಚ್ಛೇದನ ಪಡೆದುಕೊಂಡಿದ್ದರು.

ಮೊದಲನೆ ವಿವಾಹದಿಂದ ಎರ್ರಿಕಾ ಮಗುವನ್ನೂ ಹೊಂದಿದ್ದಾರೆ. ಇದಾದ ಬಳಿಕ ತನ್ನ ಪತಿಯ ತಂದೆಯೊಂದಿಗೆ ಕಾಲ ಕಳೆಯುತ್ತಿದ್ದ ಎರ್ರಿಕಾ ಅವರೊಂದಿಗೆ ಪ್ರೇಮಪಾಶಕ್ಕೆ ಬಿದ್ದಿದ್ದಾಳೆ. ಈ ದಂಪತಿ 2018ರಲ್ಲಿ ವಿವಾಹವಾಗಿದ್ದು ಇವರಿಬ್ಬರಿಗೆ ಇದೀಗ ಹೆಣ್ಣು ಮಗುವಿನ ಜನನವಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿ ಎರ್ರಿಕಾ, ಜೆಫ್​ಗೆ ವಯಸ್ಸಾಗಿದ್ದರೂ ಸಹ ಅವರ ಆತ್ಮ ಇನ್ನೂ ಯುವಕರಂತೆ ಇದೆ. ಜಸ್ಟಿನ್ ಕೂಡ ನಮ್ಮ ಸಂಬಂಧವನ್ನ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...