alex Certify ಓದು ಎಂದರೆ ಫೇಸ್ ಕ್ಯಾಮರಾ ಎದುರು ಫೋಟೋ ಇಟ್ಟು ಆಡಿಕೊಂಡಿದ್ದ 5 ವರ್ಷದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓದು ಎಂದರೆ ಫೇಸ್ ಕ್ಯಾಮರಾ ಎದುರು ಫೋಟೋ ಇಟ್ಟು ಆಡಿಕೊಂಡಿದ್ದ 5 ವರ್ಷದ ಬಾಲಕ

ಐದು ವರ್ಷದ ಪುಂಡ ಬಾಲಕ ಚತುರ ಬುದ್ಧಿಯಿಂದ ತನ್ನ ಅಮ್ಮನಿಗೇ ಮೋಸ ಮಾಡಿ ಆಟವಾಡಲು ತೆರಳಿದ ಕತೆಯಿದು. ಲೌರಾ ಮಾಜ್ ಎಂಬುವವರಿಗೆ ಕರೋನಾ ಲಾಕ್‌ ಡೌನ್ ನಿಂದ ವರ್ಕ್ ಪ್ರಮ್ ಹೋಮ್ ನೀಡಲಾಗಿತ್ತು.‌

ಬೆಟ್ಟದಷ್ಟು ಕಚೇರಿ ಕೆಲಸ ಮಾಡುವುದಿದ್ದರಿಂದ ಅವರು ತಮ್ಮ ಐದು ವರ್ಷದ ಮಗನಿಗೆ ಮಹಡಿ ಮೇಲೆ ಓದಿಕೊಳ್ಳುವಂತೆ ಸೂಚಿಸುತ್ತಾರೆ‌. ಆತನನ್ನು ಒಬ್ಬನನ್ನೇ ಬಿಟ್ಟರೆ ಓದಲಾರ ಎಂಬ ಕಾರಣಕ್ಕೆ ಐ ಪ್ಯಾಡ್ ನಲ್ಲಿ ಫೇಸ್ ಕ್ಯಾಮರಾ ಆನ್ ಮಾಡಿ ಅದರ ಎದುರು ಕುಳಿತು ಓದುವಂತೆ ಸೂಚಿಸುತ್ತಾರೆ.

ತಮ್ಮ ಲ್ಯಾಪ್ ಟಾಪ್ ಮೂಲಕ ಮಗ ಫೇಸ್ ಕ್ಯಾಮರಾ ಎದುರೇ ಕುಳಿತಿರುವುದನ್ನು ಗಮನಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ಮಹಡಿ ಮೇಲೆ ತೆರಳಿ ನೋಡಿದಾಗ ಅಮ್ಮನಿಗೆ ಅಚ್ಚರಿ ಕಾದಿತ್ತು.

ಐದು ವರ್ಷದ ಬಾಲಕ ಲುಕಾ ತನ್ನ ಅಕ್ಕನ ಐ ಪ್ಯಾಡ್ ನಲ್ಲಿದ್ದ ತನ್ನ ಫೋಟೋ ತೆರೆದು ಅದನ್ನು ತನ್ನ ಐ ಪ್ಯಾಡ್ ಲೆನ್ಸ್ ಎದುರಿಗಿಟ್ಟು, ತಾನು ತನ್ನಷ್ಟಕ್ಕೆ ಆಡಿಕೊಂಡಿದ್ದ. ಮಗನ ಫೋಟೋವನ್ನೇ ನೋಡಿ ಅಮ್ಮ ಆತ ಓದುತ್ತಿದ್ದಾನೆ ಎಂದು ತಿಳಿದುಕೊಂಡಿದ್ದರು.

ಬಾಲಕ ಲುಕಾನನ್ನು ಪ್ರಶ್ನಿಸಿದಾಗ ನಾನು ಚತುರನಿದ್ದೇನೆ ಎಂದು ಉತ್ತರ ನೀಡಿದ ಎಂದು ತಾಯಿ ಲೌರಾ ಉತ್ತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...