alex Certify ಮರಳಿನಲ್ಲಿ ಸೇರಿತ್ತು ನೂರು ವರ್ಷಕ್ಕೂ ಹಿಂದಿನ ಮನುಷ್ಯನ ಮೂಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳಿನಲ್ಲಿ ಸೇರಿತ್ತು ನೂರು ವರ್ಷಕ್ಕೂ ಹಿಂದಿನ ಮನುಷ್ಯನ ಮೂಳೆ..!

ರಷ್ಯಾ ಪಟ್ಟಣವಾದ ಕಿರೆನ್ಸ್ಕ್​​ನ  ಬೀದಿಗಳಲ್ಲಿ ಮರಳಿನೊಂದಿಗೆ ಮನುಷ್ಯನ ತಲೆ ಬುರುಡೆ  ಮೂಳೆಗಳನ್ನ ಮಿಶ್ರಣ ಮಾಡಿ ಇಟ್ಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಈ ಮೂಳೆಗಳ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಷ್ಯಾ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮೆಟ್ರೋ ಯುಕೆ ನೀಡಿದ ವರದಿ ಪ್ರಕಾರ, ಇಲ್ಲಿ ಸಿಕ್ಕ ಅವಶೇಷಗಳು 100 ವರ್ಷಕ್ಕೂ ಹಿಂದಿನವು ಎಂದು ನಂಬಲಾಗಿದೆ. 1917ರಿಂದ 1920ರ ದಶಕದ ಆರಂಭದಲ್ಲಿ ನಡೆದ ರಷ್ಯಾ ಅಂರ್ತಯುದ್ಧದಲ್ಲಿ ಬಲಿಯಾದವರ ಪಳಯುಳಿಕೆ ಇರಬಹುದೆಂದು ಅಂದಾಜಿಸಲಾಗಿದೆ.

ಈ ಅವಶೇಷಗಳು ಮಾನವನ ಮೂಳೆಗಳು ಎಂದು ದೃಢೀಕರಿಸಲಾಗಿದೆಯಾದರೂ ಅಧಿಕಾರಿಗಳು ಈ ಬಗ್ಗೆ ಯಾವುದೇ ವಿವರಣೆಯನ್ನ ನೀಡಿಲ್ಲ.  ಖಾಸಗಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ರೀತಿ ಅವಶೇಷಗಳನ್ನ ಬೀದಿಯಲ್ಲಿ ಇಡಲಾಗಿದೆ ಎಂದು ಕೆಲ ವರದಿಗಳು ಹೇಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...