alex Certify ಕುತೂಹಲಕರವಾಗಿದೆ ಈ ಯುವತಿಯ ʼಪ್ರೇಮ ಕಹಾನಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕರವಾಗಿದೆ ಈ ಯುವತಿಯ ʼಪ್ರೇಮ ಕಹಾನಿʼ

How I Met Your Mother: Nigerian Prince Rented Entire New York Restaurant  for First Date with Wifeನೈಜೇರಿಯಾ ರಾಜಮನೆತನದ ದಂಪತಿ ತಮ್ಮ ಫಸ್ಟ್​ ಡೇಟ್​ ಸ್ಟೋರಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನೈಜೀರಿಯಾ ರಾಜ ಕುನ್ಲೆ 16 ವರ್ಷಗಳ ಹಿಂದೆ ತನ್ನ ಭಾವೀ ಪತ್ನಿಯನ್ನ ಮೊದಲ ಬಾರಿಗೆ ಕಂಡಾಗ ಈಕೆಯೇ ತನ್ನ ಬಾಳಸಂಗಾತಿಯಾಗುತ್ತಾಳೆಂದು ಊಹಿಸಿರಲಿಲ್ಲವಂತೆ. ಉದ್ಯಮ ಉದ್ದೇಶದಿಂದ ಪ್ರಿನ್ಸ್ ನ್ಯೂಯಾರ್ಕ್​ಗೆ ಭೇಟಿ ನೀಡಿದ್ದ ವೇಳೆ ಅವರು ಮೊದಲ ಬಾರಿಗೆ ಕೈಶಾ ಓಮಿಲಾನಾರನ್ನ ನೋಡಿದ್ದಾರೆ. ಈ ವೇಳೆ ಇವರಿಬ್ಬರ ನಡುವೆ ನಂಬರ್​ ಎಕ್ಸ್​ಚೇಂಜ್​ ಆಗಿದೆ.

ಅವರ ಫಸ್ಟ್​ ಡೇಟ್​ಗಾಗಿ ಕುನ್ಲೆ ಬ್ರೆಜಿಲಿಯನ್​ ರೆಸ್ಟೋರೆಂಟ್​ನ್ನ ಬಾಡಿಗೆಗೆ ಪಡೆದಿದ್ದರು. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ರೆಸ್ಟೋರೆಂಟ್​ ನ್ನ ಗುಲಾಬಿ ದಳಗಳಿಂದ ಸಿಂಗರಿಸಲಾಗಿತ್ತು. ಹಾಗೂ ಇಲ್ಲೇ ಕುನ್ಲೆ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಕುನ್ಲೆ ನೈಜೆರಿಯಾ ರಾಜ ಎಂದು ತಿಳಿಯೋವಷ್ಟರಲ್ಲಿ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ 2 ವರ್ಷಗಳೇ ಕಳೆದಿತ್ತು. ಕುನ್ಲೆ ತಾಯಿ ತನ್ನ ಮಗ ರಾಜ ಎಂದು ಹೇಳಿದಾಗ ಕೈಶಾ ಆಘಾತಕ್ಕೊಳಗಾಗಿದ್ದರಂತೆ.

ಈ ದಂಪತಿ ಜನವರಿ 28 , 2006ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಹಾಗೂ ಈ ದಂಪತಿಯ ಪ್ರೀತಿಯ ಸಂಕೇತವಾಗಿ ಇದೀಗ ಇಬ್ಬರು ಮಕ್ಕಳು ಸಹ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...