alex Certify ಮೊದಲ ಬಾರಿ ಡೇಟಿಂಗ್‌ ಹೋಗ್ತಿದ್ದೀರಾ….? ಈ ತಪ್ಪುಗಳನ್ನು ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿ ಡೇಟಿಂಗ್‌ ಹೋಗ್ತಿದ್ದೀರಾ….? ಈ ತಪ್ಪುಗಳನ್ನು ಮಾಡಬೇಡಿ

ಗೆಳೆಯ ಅಥವಾ ಗೆಳತಿಯ ಜೊತೆಗೆ ಮೊದಲ ಬಾರಿ ಡೇಟಿಂಗ್‌ ಹೋಗುವಾಗ ಪ್ರತಿಯೊಬ್ಬರಲ್ಲೂ ಅದೇನೋ ಹೊಸ ಬಗೆಯ ಉತ್ಸಾಹ, ಖುಷಿ ಇರೋದು ಸಹಜ. ಇದಕ್ಕಾಗಿ ಎಲ್ಲರೂ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ತಾರೆ. ಆದರೂ ಕೆಲವೊಮ್ಮೆ ಮೊದಲ ಬಾರಿ ಡೇಟಿಂಗ್‌ಗೆ ಹೋದಾಗ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಇದರಿಂದಾಗಿ ಆ ಸಂಬಂಧ ಅವತ್ತೇ ಕೊನೆಯಾಗುವ ಅಪಾಯವೂ ಇರುತ್ತದೆ.

ಡೇಟಿಂಗ್‌ಗೆ ಹೋಗುವ ದಿನಾಂಕ, ಸಮಯ, ಸ್ಥಳ ಎಲ್ಲವೂ ಮೊದಲೇ ನಿಗದಿಯಾಗಿರುತ್ತದೆ. ಅಂಥದ್ರಲ್ಲಿ ನೀವು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪದೇ ಇದ್ದರೆ ಡೇಟಿಂಗ್‌ ಫ್ಲಾಪ್‌ ಆಗಬಹುದು. ಈ ಕಾರಣಕ್ಕೆ ನಿಮ್ಮ ಸಂಗಾತಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಮೊದಲ ಡೇಟ್‌ನಲ್ಲೇ ಬ್ರೇಕಪ್‌ ಆಗುವ ಅಪಾಯವೂ ಇದೆ.

ಸ್ಮಾರ್ಟ್‌ಫೋನ್ ನಮಗೆ ಮೂಲಭೂತ ಅವಶ್ಯಕತೆಯಾಗಿದೆ. ಆದರೆ ಅದನ್ನು ಯಾವಾಗ ಮತ್ತು ಎಲ್ಲಿ ಬಳಸಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ನೀವು ಮೊದಲ ಬಾರಿ ಡೇಟಿಂಗ್‌ ಹೋದಾಗ ಸಂಗಾತಿಯನ್ನು ನಿರ್ಲಕ್ಷಿಸಿ ಪೋನ್‌ನಲ್ಲೇ ಬ್ಯುಸಿಯಾಗಬೇಡಿ. ತನಗಿಂತ ಫೋನ್‌ ಹೆಚ್ಚಾಯ್ತು ಎಂಬ ಭಾವನೆ ಸಂಗಾತಿಗೆ ಬರಬಾರದು. ಮೊಬೈಲ್‌ ಅನ್ನು ಸೈಲೆಂಟ್‌ನಲ್ಲಿಡುವುದು ಉತ್ತಮ.

ಅನೇಕರು ಮೊದಲ ಡೇಟ್‌ಗಾಗಿ ಡ್ಯಾನ್ಸ್ ಬಾರ್ ಅನ್ನು ಆಯ್ಕೆ ಮಾಡುತ್ತಾರೆ. ಈ ಸ್ಥಳವನ್ನು ಆಯ್ಕೆ ಮಾಡುವುದರಲ್ಲಿ ಮತ್ತು ಕೆಲವು ಪಾನೀಯಗಳನ್ನು ಸೇವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮದ್ಯಪಾನ ಮಾಡಿದ್ರೆ ನಿಮ್ಮ ಮೇಲೆ ನಿಮಗೆ ನಿಯಂತ್ರಣವಿರುವುದಿಲ್ಲ. ಕೆಲವೊಂದು ತಪ್ಪುಗಳು ಸಂಭವಿಸಬಹುದು. ಸಂಗಾತಿಗೆ ನಿಮ್ಮ ಮೇಲೆ ತಪ್ಪು ಗ್ರಹಿಕೆ ಉಂಟಾಗಬಹುದು.

ಮೊದಲ ಡೇಟಿಂಗ್‌ನಲ್ಲೇ ಸಂಗಾತಿಯನ್ನು ಮೆಚ್ಚಿಸಲು ಕೆಲವರು ತಮ್ಮ ಜ್ಞಾನ ಪ್ರದರ್ಶನ ಮಾಡ್ತಾರೆ, ಕೆಲಸದ ಬಗ್ಗೆ ಹೆಮ್ಮೆಪಟ್ಟುಕೊಳ್ತಾರೆ. ಈ ರೀತಿಯ ನಡವಳಿಕೆಯನ್ನು ಬಾಲಿಶವಾಗಿ ಕಾಣಬಹುದು. ನೀವು ಮೊದಲ ಬಾರಿ ಡೇಟಿಂಗ್‌ಗೆ ಹೋದಾಗ ಸಂಗಾತಿಯ ಜೊತೆಯಲ್ಲಿ ಗಂಭೀರ ವಿಷಯದ ಬಗ್ಗೆ ಮಾತನಾಡಬಾರದು. ತಮಾಷೆಯ ವಿಷಯಗಳನ್ನು ಚರ್ಚಿಸುವ ಮೂಲಕ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಮೊದಲ ಡೇಟಿಂಗ್‌ನಲ್ಲೇ ಮಿತಿಮೀರಬೇಡಿ. ಸಂಗಾತಿಯನ್ನು ಬಲವಂತವಾಗಿ ಸ್ಪರ್ಷಿಸುವುದು ಬೇಡ. ಚೆನ್ನಾಗಿ ಮಾತನಾಡಿ, ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ, ವಿಶ್ವಾಸ ಬೆಳೆಸಿ. ಹಾಗಾದಲ್ಲಿ ಮಾತ್ರ ಸಂಬಂಧ ಮುಂದುವರಿಯಲು ಸಾಧ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...