alex Certify ಬೆತ್ತಲಾಗಿ ಬಂದ ಯುವತಿಯಿಂದ ಬಯಲಾಯ್ತು ಅಕ್ರಮ‌ ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲಾಗಿ ಬಂದ ಯುವತಿಯಿಂದ ಬಯಲಾಯ್ತು ಅಕ್ರಮ‌ ಸಂಬಂಧ

ಸ್ಪೇನ್: ಕರೋನಾ ಲಾಕ್‌ ಡೌನ್ ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವವರ ಗೋಳು ಕೇಳುವವರಿಲ್ಲ. ಇಲ್ಲೊಬ್ಬ ಮನೆಯಿಂದ ವರದಿ ನೀಡುವಾಗ ತನಗೆ ಅರಿವಿಲ್ಲದ ಹಾಗೆ ತನ್ನ ಅಕ್ರಮ ಸಂಬಂಧವನ್ನು ಬಯಲಿಗೆ ತಂದುಕೊಂಡಿದ್ದಾನೆ.

ಯುಟ್ಯೂಬ್ ಚಾನಲ್ ಒಂದಕ್ಕೆ ಮನೆಯಿಂದಲೇ ಕರೋನಾ ಲಾಕ್ ‌ಡೌನ್ ಕುರಿತು ವರದಿ ನೀಡುತ್ತಿದ್ದ ಸ್ಪ್ಯಾನಿಶ್ ವರದಿಗಾರ ಅಲ್ಫನ್ಸೋ ಮರ್ಲೋಸ್ ಹಿಂದೆ ಅರೆನಗ್ನ ಯುವತಿ ಹಾದು ಹೋಗುತ್ತಾಳೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಅಲ್ಲಿದ್ದ ಯುವತಿ ಅಲ್ಫನ್ಸೋ ಸಂಗಾತಿ ಮಾರ್ಟ್ ಲೋಪೆಜ್ ಅಲ್ಲ ಎಂಬುದು ವಿಶೇಷ.

ಆಕೆಯನ್ನು ಅಲೆಕ್ಸಾ ರಿವಾಸ್ ಎಂದು ಗುರುತಿಸಲಾಗಿದ್ದು, ಆಕೆಯು ಅಲ್ಫನ್ಸೋ ಸಹ ವರದಿಗಾರ್ತಿಯಾಗಿದ್ದಾಳೆ. ಈ ವಿಷಯ ಸುದ್ದಿಯಾದ ಹಾಗೆ ಅಲ್ಫನ್ಸೋ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ. “ಅಲೆಕ್ಸಾ ತಮ್ಮ ಗೆಳೆಯನೊಂದಿಗೆ ದೂರವಾದ ನೋವಲ್ಲಿ ಇದ್ದಳು. ನಾವಿಬ್ಬರೂ ತುಂಬಾ ದೊಡ್ಡ ನಾಚಿಕೆಗೇಡಿನ ಕೆಲಸ ಮಾಡಿದ್ದೇವೆ” ಎಂದು ಕ್ಷಮೆ ಕೊರಿದ್ದಾನೆ.

ತಮ್ಮ ವೈಯಕ್ತಿಕ ಜೀವನವನ್ನು ಗೌರವಿಸದ ಯುಟ್ಯೂಬ್ ಚಾನಲ್ ಅನ್ನು ಸಹ ನಿಂದಿಸಿದ್ದಾರೆ. ಇದೆ ರೀತಿಯ ಹಲವು ಘಟನೆಗಳು ನಡೆಯುತ್ತಿದ್ದು, ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಲಾಕ್ ಡೌನ್ ಮುಗಿದರೆ ಸಾಕು ಎನ್ನುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...