alex Certify ಡಾಲ್ಫಿನ್​ಗೆ ಮರುಜೀವ ಕೊಟ್ಟ ಕಡಲ ಮಕ್ಕಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾಲ್ಫಿನ್​ಗೆ ಮರುಜೀವ ಕೊಟ್ಟ ಕಡಲ ಮಕ್ಕಳು..!

Group of Chinese Fishermen Rescue Stranded Bottlenose Dolphin and Release It in the Sea

ದಕ್ಷಿಣ ಚೀನಾ ಭಾಗದ ಸಮುದ್ರವೊಂದರಲ್ಲಿ ಕೆಸರಿನ ರಾಶಿಯಲ್ಲಿ ಸಿಲುಕಿದ್ದ ಡಾಲ್ಫಿನ್​ನ್ನ ಮೀನುಗಾರರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುವಾಂಗ್ಸಿ ಪ್ರಾಂತ್ಯದ ಕ್ಸಿಲಿ ಬೇ ಪಟ್ಟಣದ ಹೊರವಲಯದಲ್ಲಿರುವ ಸಮುದ್ರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ.

ಕೆಸರಿನಿಂದ ಬಿದ್ದು ಏಳಲಾಗದೇ ಒದ್ದಾಡುತ್ತಿದ್ದ ಡಾಲ್ಫಿನ್​ನ್ನ ಗಮನಿಸಿದ ಮೀನುಗಾರರು ಈ ಬಗ್ಗೆ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಡಾಲ್ಫಿನ್ ನ್ನ ರಕ್ಷಣೆ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ರಕ್ಷಣಾ ಕಾರ್ಯದ ವಿಡಿಯೋ ವೈರಲ್​ ಆಗಿದೆ.

ಕೆಸರಿನಲ್ಲಿ ಸಿಲುಕಿದ್ದ ಡಾಲ್ಫಿನ್​ ಮೈ ಮೇಲೆ ನೀರು ಹಾಕಿ ಬಳಿಕ ಅದನ್ನ ಬಿಳಿ ಶೀಟ್​​ನ ಸಹಾಯದಿಂದ ಎತ್ತಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಸಮುದ್ರದ ಅಲೆಯಲ್ಲಿ ಈಜುತ್ತಿದ್ದ ಡಾಲ್ಫಿನ್​ ಪದೇ ಪದೇ ದಡದ ಬಳಿಗೆ ಬಂದು ತನ್ನನ್ನ ಕಾಪಾಡಿದ ಜನಕ್ಕೆ ಧನ್ಯವಾದ ಹೇಳಿದೆ. ಡಾಲ್ಫಿನ್​ ಸಮುದ್ರದ ಆಳದಲ್ಲಿ ಮರೆಯಾಗುವವರೆಗೂ ಕಾದ ಮೀನುಗಾರರು ಬಳಿಕ ಸ್ಥಳದಿಂದ ವಾಪಸ್ಸಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...