alex Certify ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ

ಡಾಲ್ಫಿನ್‌ಗಳ ಜಿಗಿತ ನೋಡುವುದೇ ಅಂದ. ಆದರೆ ಇನ್ನೂ ಅತ್ಯದ್ಭುತ ಎನ್ನುವ ವಿಡಿಯೋ ಒಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸುವುದರ ಜೊತೆಗೆ ಉಲ್ಲಾಸಗೊಳಿಸುತ್ತದೆ.

‘ಸೈನ್ಸ್ ಗರ್ಲ್’ ಎಂಬ ಬಳಕೆದಾರರು ಈ ಕಿರು ಕ್ಲಿಪ್ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸಮುದ್ರವನ್ನು ತೋರಿಸಲಾಗಿದೆ. ಅತ್ತ ಕಾಮನಬಿಲ್ಲಿನ ಚಿತ್ರಣ ನೋಡಬಹುದು. ಹಿನ್ನೆಲೆ ಮ್ಯೂಸಿಕ್​ ಹಾಕಲಾಗಿದೆ. ಆ ಕಾಮನ ಬಿಲ್ಲಿಗೆ ಸರಿಯಾಗಿ ಡಾಲ್ಫಿನ್​ ಹಾರುತ್ತದೆ.

ಕನಸಿನಲ್ಲಿ ಕಾಣುವ ದೃಶ್ಯದಂತೆ ಇದು ಗೋಚರಿಸುತ್ತದೆ. ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಿದ್ದನ್ನು ಸ್ಲೋ ಮೋಷನ್​ನಲ್ಲಿ ಹಿನ್ನೆಲೆ ಸಂಗೀತದೊಂದಿಗೆ ಶೇರ್​ ಮಾಡಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಛಾಯಾಗ್ರಾಹಕ ಜೈಮೆನ್ ಹಡ್ಸನ್ ಅವರು ವಿಡಿಯೋ ಸೆರೆ ಹಿಡಿದಿದ್ದಾರೆ.

ಈ, ಬೆರಗುಗೊಳಿಸುವ ವಿಡಿಯೋ ಇದಾಗಲೇ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಕಮೆಂಟ್​ ಬಾಕ್ಸ್​ ಬೆರಗಿನ ಕಮೆಂಟ್​ಗಳಿಂದ ತುಂಬಿ ಹೋಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...