alex Certify ಅಜ್ಜಿಯ ಡಾನ್ಸ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿಯ ಡಾನ್ಸ್‌ ವಿಡಿಯೋ ವೈರಲ್

ಟಿಕ್ ಟಾಕ್ ವಿಡಿಯೋ ಒಂದರಿಂದ ಅಜ್ಜಿಯೊಬ್ಬಳು ಕೆಲವೇ ದಿನದಲ್ಲಿ ಪ್ರಸಿದ್ಧಳಾಗಿಬಿಟ್ಟಿದ್ದಾಳೆ. @/d.agonzalez ಎಂಬ ಖಾತೆಯಿಂದ ಅಪ್ಲೋಡ್ ಆದ ಅಜ್ಜಿ ಮೊಮ್ಮಗಳ‌ ನೃತ್ಯದ ವಿಡಿಯೋಗಳು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ತಮ್ಮ ಅಜ್ಜಿಗೆ ನೃತ್ಯವನ್ನು ಹೇಳಿಕೊಡುವ ವಿಡಿಯೋವನ್ನು ಮೊದಲು ಅಪ್ಲೋಡ್ ಮಾಡಿದ ಮೊಮ್ಮಗಳು, ಮೆಚ್ಚುಗೆ ವ್ಯಕ್ತವಾದ ಕಾರಣ, ನೃತ್ಯ ಮಾಡುವ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಳು. ಮತ್ತಷ್ಟು ಜನರು ಅಜ್ಜಿಯ ವಿಡಿಯೋವನ್ನು ನೋಡಲು ಇಚ್ಚಿಸಿದ್ದರಿಂದ, ಮೊಮ್ಮಗಳು ಮೂರನೇ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾಳೆ. ನೋಡುಗರು ಅಜ್ಜಿಯ ಉತ್ಸಾಹ ಕಂಡು ಖುಷಿಪಟ್ಟಿದ್ದಾರೆ.

ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಎಷ್ಟೋ ಜನರನ್ನು ಜಗತ್ತಿಗೆ ಪರಿಚಯಿಸಿವೆ. ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಾಕಷ್ಟಿದೆ. ಅಂಥದ್ದೇ ಒಂದು ಅವಕಾಶ ಎಂದರೆ ಟಿಕ್ ಟಾಕ್ ಆ್ಯಪ್. ಲಾಕ್ ಡೌನ್ ನಿಂದಾಗಿ ಜನರು ಸಹ ಸಾಕಷ್ಟು ಖಾಲಿ ಇರುವುದರಿಂದ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದೊಂದು ಉತ್ತಮ ಮಾರ್ಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...