alex Certify ಮೊಮ್ಮಕ್ಕಳನ್ನು ಅಪ್ಪಿಕೊಳ್ಳಲು ಹಿಮಕರಡಿ ವೇಷ ಧರಿಸಿದ ಅಜ್ಜ – ಅಜ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಕ್ಕಳನ್ನು ಅಪ್ಪಿಕೊಳ್ಳಲು ಹಿಮಕರಡಿ ವೇಷ ಧರಿಸಿದ ಅಜ್ಜ – ಅಜ್ಜಿ

ಕೋವಿಡ್-19 ಕಾಟದಿಂದ ಹಿರಿಯರಿಗೆ ತಮ್ಮ ಮೊಮ್ಮಕ್ಕಳನ್ನು ನೆಮ್ಮದಿಯಾಗಿ ಅಪ್ಪಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ಸೋಂಕು ವಯಸ್ಸಾದವರಿಗೆ ತಗುಲುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಈ ಸಂಕಟ ಪಡಬೇಕಾಗಿದೆ.

ಈ ಕಾರಣದಿಂದಲೇ ಅಪ್ಪಿಕೊಳ್ಳಲೆಂದೇ ವಿಶೇಷ ಪರದೆಯೊಂದು ಹೊರಬಂದಿದ್ದು ಅದು ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಈ ಪರದೆ ಹಾಕಿಕೊಂಡು ಅಪ್ಪಿಕೊಳ್ಳುವುದರಿಂದ ಆ ವ್ಯಕ್ತಿಗಳು ಪರಸ್ಪರ ದೈಹಿಕವಾಗಿ ಸಂಪರ್ಕಕ್ಕೆ ಬರದೇ ಆಲಿಂಗನ ಮಾಡಿಕೊಳ್ಳಬಹುದಾಗಿದೆ.

ಬ್ರಿಟನ್‌ನ ಹಿರಿಯ ದಂಪತಿಯೊಂದು ತಮ್ಮ ಮೊಮ್ಮಕ್ಕಳನ್ನು ಆಲಿಂಗಿಸಿಕೊಳ್ಳಲು ಹೊಸದೊಂದು ಐಡಿಯಾ ಕಂಡುಕೊಂಡಿದ್ದಾರೆ. ಬಾರ್ಬರಾ ಹಾಗೂ ಕ್ಲೈವ್‌ ವಾಲ್ಶಾ ಹೆಸರಿನ ಈ ಜೋಡಿ ಈಗ 70ರ ಹರೆಯದಲ್ಲಿದೆ. ಕಳೆದ ಮಾರ್ಚ್‌ನಿಂದಲೂ ಇವರಿಗೆ ತಮ್ಮ ಮೊಮ್ಮಕ್ಕಳನ್ನು ಅಪ್ಪಿ ಮುದ್ದಾಡಲು ಸಾಧ್ಯವಾಗಿಲ್ಲ.

ಹಿಮಗರಡಿಯ ಕಾಸ್ಟ್ಯೂಮ್‌ನಲ್ಲಿ ಮಿಂಚುತ್ತಿರುವ ಈ ಜೋಡಿ ತಮ್ಮ ಮೊಮ್ಮಕ್ಕಳನ್ನು ಆಲಿಂಗಿಸಿಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆಲ್ಲುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...