alex Certify ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ವೈನ್ ಸುರಿಯುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ವೈನ್ ಸುರಿಯುವ ವಿಡಿಯೋ

ನೆಟ್ಟಿಗರನ್ನು ಕನ್ಫ್ಯೂಸ್ ಮಾಡುವ ಕಲಾಕಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಇದೀಗ ಯುಎಸ್ ನ ಬೋಸ್ಟನ್ ಮೂಲದ ವಿಎಫ್ ಎಕ್ಸ್ ಕಲಾವಿದ ಕೆವಿನ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ ನೆಟ್ಟಿಗರನ್ನು ಕನ್ಫ್ಯೂಸ್ ಮಾಡಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಜನರನ್ನು ರಂಜಿಸುತ್ತಿರುವ ಇಂಟರ್ನೆಟ್ ಮಾಧ್ಯಮ, ಇಂಥ ವಿಡಿಯೋಗಳಿಂದಲೇ ಹೆಸರುವಾಸಿಯಾಗಿದೆ. ನೆಟ್ಟಿಗರು ಸಹ ಇಂಥವನ್ನು ನೋಡಿ ಆನಂದಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಕಾಣುವಂತೆ 2 ಗ್ಲಾಸ್ ಗಳನ್ನು ಅಕ್ಕಪಕ್ಕದಲ್ಲಿ ಉಲ್ಟಾಪಲ್ಟ ಇಟ್ಟು ವೈನ್ ಸುರಿಯಲಾಗುತ್ತದೆ. ವೈನ್ ಮಾತ್ರ ನೆಲಕ್ಕೆ ಸುರಿಯದೇ ಕಣ್ಣಿಗೆ ಕಾಣದ ಗ್ಲಾಸ್ ನಲ್ಲಿ ಸೇರಿಕೊಳ್ಳುತ್ತದೆ. ಬಳಿಕ ಅಲ್ಲಿದ್ದ ವ್ಯಕ್ತಿ ಅದನ್ನೆತ್ತಿಕೊಳ್ಳುತ್ತಾರೆ.

ನೋಡಲು ಅಚ್ಚರಿ ಎನಿಸಿದರೂ ಈ ಕೌತುಕವನ್ನು vfx ಕೌಶಲ್ಯದಿಂದ ಮಾಡಲಾಗಿದೆಯಂತೆ. ಈ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದಾಗಿನಿಂದಲೂ ಸಾಕಷ್ಟು ವೈರಲ್ ಆಗಿದೆ. ನೂರಾರುಮಂದಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...