alex Certify ಅರ್ಧ ತಿಂದಿದ್ದ ತಿಂಡಿ ಸಹಾಯದಿಂದ 9 ವರ್ಷದ ಹಿಂದಿನ ಕೇಸ್​ ಭೇದಿಸಿದ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ತಿಂದಿದ್ದ ತಿಂಡಿ ಸಹಾಯದಿಂದ 9 ವರ್ಷದ ಹಿಂದಿನ ಕೇಸ್​ ಭೇದಿಸಿದ ಪೊಲೀಸರು…!

ಅರ್ಧ ತಿಂದು ಬಿಟ್ಟಿದ್ದ ಸಾಸೇಜ್​​ನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸೋದ್ರ ಮೂಲಕ 9 ವರ್ಷದ ಕಳ್ಳತನದ ಪ್ರಕರಣವನ್ನ ಭೇದಿಸುವಲ್ಲಿ ಜರ್ಮನ್​ ಪೊಲೀಸರು ಯಶಸ್ವಿಯಾಗಿದ್ದಾರೆ.

ಜರ್ಮನ್​​ನ ಪಶ್ಚಿಮ ಭಾಗದಲ್ಲಿರುವ ಶ್ವೆಲ್ಮ್ ನಗರದ ಪೊಲೀಸ್​ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳ್ಳ ಅರ್ಧ ತಿಂದು ಬಿಟ್ಟಿದ್ದ ತಿನಿಸನ್ನ ಆಧರಿಸಿ ಈ ಪ್ರಕರಣವನ್ನ ಭೇದಿಸಿದ್ದೇವೆ ಎಂದು ಹೇಳಿದ್ರು.

ವರ್ಸ್ಟ್​ ಎಂಬ ಹೆಸರಿನ ಈ ಸಾಸೇಜ್​​ನ್ನು ಮಾರ್ಚ್ 2012ರಲ್ಲಿ ಶ್ವೆಲಂನಲ್ಲಿ ನಡೆದ ಕಳ್ಳತನದಲ್ಲಿ ಆರೋಪಿ ತಿಂದಿದ್ದಾನೆ ಎನ್ನುವುದು ಪೊಲೀಸರ ಶಂಕೆಯಾಗಿದೆ.

ಈ ವಿಷಯದಲ್ಲಿ ವಿಶ್ವದ ‘ಅತಿ ಸಿರಿವಂತ’ರನ್ನೇ ಹಿಂದಿಕ್ಕಿದ ಗೌತಮ್ ಅದಾನಿ

ದೇಶದಲ್ಲಿ ಸಂಬಂಧವಿಲ್ಲದ ಹಿಂಸಾತ್ಮಕ ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿಯಿಂದ ಹೊಂದಾಣಿಕೆಯ ಡಿಎನ್‌ಎ ಮಾದರಿಯನ್ನು ಕಂಡುಕೊಂಡ ಫ್ರೆಂಚ್ ತನಿಖಾಧಿಕಾರಿಗಳು ಜರ್ಮನ್ ಪೊಲೀಸರನ್ನು ಎಚ್ಚರಿಸಿದ್ದಾರೆ.

ಆದರೆ ವಿಚಿತ್ರ ಅಂದರೆ ಕಳ್ಳತನದ ತನಿಖೆಯ ಕಾನೂನು ಅವಧಿ ಮುಗಿದ ಕಾರಣ ಶಂಕಿತನು ಶಿಕ್ಷೆಯಿಂದ ಮುಕ್ತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...