alex Certify ಕುರಿಗಳ ಅಟಾಟೋಪಕ್ಕೆ ಬೆಚ್ಚಿಬಿದ್ದ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರಿಗಳ ಅಟಾಟೋಪಕ್ಕೆ ಬೆಚ್ಚಿಬಿದ್ದ ಜನ….!

ನಿವ್ಶೇರ್: ಟರ್ಕಿ ದೇಶದ ರಾಜಧಾನಿ ನಗರ ನಿವ್ಶೇರ್ ನ ಬೀದಿಯೊಂದು ಇತ್ತೀಚೆಗೆ ಕೆಲಕಾಲ ಅಪಾಯಕಾರಿಗಳ ವಶಕ್ಕೊಳಪಟ್ಟಿತ್ತು. ಬೀದಿಯಲ್ಲಿ ಓಡಾಡುವ ಜನ ಹಲ್ಲೆಗೊಳಗಾದರು. ಅಪಾಯಕಾರಿಗಳು ಯಾರು ಎನ್ನುತ್ತೀರಾ..? ಐದು ಕುರಿಗಳು!!

ನಿವ್ಶೇರ್ ನಗರಾಡಳಿತ ಕುರಿಗಳ ಉಪಟಳದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ. 1 ಕುರಿ, ಒಂದು ಮೇಕೆ ಹಾಗೂ 3 ಟಗರುಗಳು ಬೀದಿಯಲ್ಲಿ ಓಡಾಡುವ ಜನರ ಮೇಲೆ ಬೆನ್ನಟ್ಟಿ ಹಲ್ಲೆಗೆ ಮುಂದಾಗಿದ್ದವು. ಜನ ಅವುಗಳಿಂದ ತಪ್ಪಿಸಿಕೊಳ್ಳಲು ಓಡಬೇಕಾಯಿತು ಎನ್ನಲಾಗಿದೆ.

ನಂತರ ಅವುಗಳನ್ನು ಹಿಡಿಯಲಾಯಿತು ಎಂದು ಕ್ಯಾಪ್ಶನ್ ಮೂಲಕ ವಿವರಿಸಲಾಗಿದೆ. ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...