alex Certify ʼಸಿಟ್ಟುʼ ತಡೆಯಲಾಗುತ್ತಿಲ್ಲವೇ…? ಅದನ್ನು ಹೊರ ಹಾಕಲು ಇಲ್ಲಿ ಸಿಗ್ತಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಿಟ್ಟುʼ ತಡೆಯಲಾಗುತ್ತಿಲ್ಲವೇ…? ಅದನ್ನು ಹೊರ ಹಾಕಲು ಇಲ್ಲಿ ಸಿಗ್ತಿದೆ ಅವಕಾಶ

ಹತಾಶೆ, ಸಿಟ್ಟು ಹಾಗೂ ಒತ್ತಡಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಬದುಕು ಸಾಗಿಸಲು ನಾವು ಏನೆಲ್ಲಾ ಮಾಡಬೇಕೆಂದು ಅರಿಯುವುದೇ ಜೀವನ.

ಕೆಲವೊಮ್ಮೆ ತಮ್ಮ ಸಿಟ್ಟನ್ನು ಮನೆಯಲ್ಲಿರುವ ವಸ್ತುಗಳ ಮೇಲೆ ತೋರಿಕೊಳ್ಳುವ ಮಂದಿಯೂ ಇದ್ದಾರೆ. ಅಂಥವರಿಗೆಂದೇ ಬ್ರೆಜಿಲ್‌ನಲ್ಲಿ ’ರೇಜ್ ರೂಂ’ ಒಂದನ್ನು ಸಿದ್ಧಪಡಿಸಲಾಗಿದೆ.

ಸಾವೋ ಪೌಲೋದ ಹೊರವಲಯದಲ್ಲಿ ಇರುವ ಈ ಕೋಣೆಯಲ್ಲಿ ಹಳೆಯ ಟಿವಿ ಸೆಟ್‌ಗಳು, ಮಷೀನ್‌ಗಳು, ಗಾಜಿನ ಚೂರುಗಳಂಥ ವಸ್ತುಗಳನ್ನು ಇಡಲಾಗಿದೆ. ಸಿಟ್ಟು ತಾಳಲಾರದ ವ್ಯಕ್ತಿ ಇಲ್ಲಿಗೆ ಬಂದು ಈ ಸಾಮಾನುಗಳನ್ನು ಮನಸೋಯಿಚ್ಛೆ ಒಡೆದು ಹಾಕಬಹುದು…!

ಏರ್‌ ಪಾಡ್‌ ಕಳೆದುಕೊಂಡು ಕಂಗಾಲಾಗಿದ್ದವರಿಗೆ ಸಿಕ್ತು ದೊಡ್ಡ ‌ʼಗಿಫ್ಟ್ʼ

ಗ್ರಾಹಕರಿಗೆ ಈ ಕೆಲಸಕ್ಕೆಂದೇ ದೊಡ್ಡ ಸುತ್ತಿಗೆಯನ್ನು ಕೊಡಲಾಗುವುದು. ಇದರ ನೆರವಿನೊಂದಿಗೆ ಟಿವಿ ಸೆಟ್‌ಗಳು, ಪ್ರಿಂಟರ್‌ಗಳು, ಗಾಜುಗಳನ್ನು ಒಡೆಯಬಹುದಾಗಿದೆ. ಹೀಗೆ ಮಾಡುವಾಗ ಈ ಮಂದಿಗೆ ಸುರಕ್ಷಾ ಕವಚಗಳನ್ನು ಧರಿಸಲು ಕೊಡಲಾಗುತ್ತೆ. ಇದಕ್ಕಾಗಿ ನೀವು $4.64 ಪಾವತಿ ಮಾಡಿದರೆ ಸಾಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...