alex Certify ಸ್ವಿಟ್ಜರ್ಲೆಂಡ್‌‌ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರಂಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಟ್ಜರ್ಲೆಂಡ್‌‌ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರಂಗು

ಜಿನೆವಾ: ಸ್ವಿಟ್ಜರ್ಲೆಂಡ್‌‌ನ ಮೆಟರ್ ಹಾರ್ನ್ ಪರ್ವತದ ಮೇಲೆ ಶುಕ್ರವಾರ ರಾತ್ರಿ ಭಾರತದ ತ್ರಿವರ್ಣ ಧ್ವಜದ ರಂಗು ಕಂಡು ಬಂತು.

ಕರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾಗಿರುವ ಭಾರತದೊಟ್ಟಿಗೆ ನಾವಿದ್ದೇವೆ ಎಂಬುದನ್ನು ಸಿಟ್ಜರ್ಲೆಂಡ್‌‌ ಈ ರೀತಿ ಸಕಾರಾತ್ಮಕವಾಗಿ ತೋರಿಸಿದೆ.

ಖ್ಯಾತ‌ ಲೇಸರ್ ಲೈಟ್ ಕಲಾವಿದ ಗೆರ್ರಿ ಹೋಪ್ಸ್ ಸ್ಟೇಟರ್‌ ಅವರು 14,692 ಅಡಿ ಎತ್ತರವಿರುವ ಪರ್ವತಕ್ಕೆ ಭಾರತದ ರಾಷ್ಟ್ರ ಧ್ವಜ ತಿರಂಗಾ ಚಿತ್ರ ನೀಡಿದ್ದಾರೆ. ಗ್ಯಾಬ್ರಿಯಲ್ ಪೆರ್ರೆನ್ ಇದರ ಚಿತ್ರ ತೆಗೆದಿದ್ದಾರೆ. ಜಿನೆವಾದ ಐಎಫ್ಎಸ್ ಅಧಿಕಾರಿ ಗುರ್ಲಿನ್ ಕೌರ್ ಫೋಟೋವನ್ನು ಶೇರ್ ಮಾಡಿದ್ದಾರೆ.

ಭಾರತದ ಜನ‌ ಅದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಪರ್ವತದ ಮೇಲೆ ಜಪಾನ್‌, ಜರ್ಮನಿ, ಯುಕೆ, ಯುಎಸ್, ಫ್ರಾನ್ಸ್, ಇಟಲಿ ಸೇರಿ ಪ್ರಮುಖ ರಾಷ್ಟ್ರಗಳ ಧ್ವಜವನ್ನು ಇಲ್ಲಿ ಚಿತ್ರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...