alex Certify ನರಿ ಮಾಡಿದ ಕೆಲಸ ನೋಡಿ ಕಂಗಾಲಾದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರಿ ಮಾಡಿದ ಕೆಲಸ ನೋಡಿ ಕಂಗಾಲಾದ ಜನ…!

ಜರ್ಮನಿಯ ಬರ್ಲಿನ್ ಬಳಿಯ ಝಾಹ್ಲೆನ್‌ಡಾರ್ಫ್ ಎಂಬಲ್ಲಿ, ಪದೇ ಪದೇ ಕಳುವಾಗುತ್ತಿದ್ದ ಚಪ್ಪಲಿಗಳು ಹಾಗೂ ಶೂಗಳ ಜಾಡು ಹಿಡಿದು ಹೊರಟಾಗ ನರಿರಾಯ ಕಂಡುಬಂದಿದ್ದಾನೆ. ಬಲೇ ಫ್ಯಾಶನ್ ಪ್ರಿಯನಾದ ಈ ನರಿರಾಯನ ಬಳಿ 100ಕ್ಕೂ ಹೆಚ್ಚು ಬಗೆಯ ಶೂಗಳು, ಫ್ಲಿಪ್‌ ಫ್ಲಾಪ್‌, ಕ್ರಾಕ್ಸ್‌ಗಳು ಹಾಗೂ ಟ್ರೇನರ್‌ಗಳು ಸಿಕ್ಕಿವೆ.

ಕಳೆದ ಕೆಲವು ದಿನಗಳಿಂದ ಈ ಊರಿನ ಜನರಿಗೆ ಕಳುವಾಗುತ್ತಿರುವ ತನ್ನ ಪಾದರಕ್ಷೆಗಳ ಹಿಂದೆ ಯಾರಿದ್ದಾರೆ ಎಂದು ತಿಳಿದುಬಂದಿರಲಿಲ್ಲ. ಆದರೆ, ನರಿರಾಯನು ಈ ಚೇಷ್ಟೆಯನ್ನು ಬಹಳ ದಿನಗಳಿಂದಲೂ ಮಾಡಿಕೊಂಡು ಬಂದಿದ್ದಾನೆ ಎಂದು ಬಳಿಕ ತಿಳಿದುಬಂದಿದೆ.

ನರಿರಾಯನ ಪಾದರಕ್ಷೆಗಳ ಕಲೆಕ್ಷನ್ ಇರುವ ಚಿತ್ರವೊಂದು ಈಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...