alex Certify ಚಲಿಸುತ್ತಿದ್ದ ಕಾರಿನ ವಿಂಡ್ ಶೀಲ್ಡ್​ಗೆ ಏಕಾಏಕಿ ಬಡಿದ ಆಮೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಕಾರಿನ ವಿಂಡ್ ಶೀಲ್ಡ್​ಗೆ ಏಕಾಏಕಿ ಬಡಿದ ಆಮೆ..!

ಕಲ್ಲು ಇಲ್ಲವೇ ಚೆಂಡು ಅಥವಾ ಮರದ ಕೊಂಬೆಗಳು ಕಾರಿನ ವಿಂಡ್​ಶೀಲ್ಡ್ ಮೇಲೆ ಬೀಳುವ ವಿಚಾರವನ್ನ ಕೇಳ್ತಾನೇ ಇರ್ತೇವೆ. ಆದರೆ ಎಂದಾದರೂ ಕಾರಿನ ವಿಂಡ್​ಶೀಲ್ಡ್​ ಮೇಲೆ ಆಮೆ ಬಿದ್ದಿದ್ದನ್ನ ಕೇಳಿದ್ದೀರಾ..?

ಪ್ಲೋರಿಡಾದ 71 ವರ್ಷದ ವೃದ್ಧೆ ತಮ್ಮ ಮಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆಮೆಯೊಂದು ಆಕೆಯ ಕಾರಿನ ವಿಂಡ್​ಶೀಲ್ಡ್​​ಗೆ ಬಂದು ಅಪ್ಪಳಿಸಿದ್ದು ಪರಿಣಾಮ ವೃದ್ಧೆಯ ಹಣೆಗೆ ಏಟಾಗಿದೆ ಎಂದು ವರದಿಯಾಗಿದೆ.

ಕೂಡಲೇ ತಾಯಿಯನ್ನ ಅಪಾಯದಿಂದ ಪಾರು ಮಾಡಿದ ಪುತ್ರಿ ಸಹಾಯಕ್ಕಾಗಿ ಇನ್ನೊಂದು ಕಾರು ಚಾಲಕನ ಬಳಿ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ಕಾರಿಗೆ ಬಂದು ಬಡಿದ ವಸ್ತು ಯಾವುದು ಎಂಬ ಅರಿವು ತಾಯಿ – ಮಗಳಿಗೆ ಇರಲಿಲ್ಲ, ಆದರೆ ಬಳಿಕ ಇದು ಆಮೆ ಎಂದು ತಿಳಿದಿದ್ದು ಎಲ್ಲರೂ ಶಾಕ್​ ಆಗಿದ್ದಾರೆ.

ವೃದ್ಧೆಗೆ ಮುಖದಲ್ಲಿ ಗಾಯಗಳಾಗಿದ್ದು ರಕ್ತ ಹರಿದಿದೆ. ಆದರೆ ಆಕೆಯ ಸ್ಥಿತಿ ಗಂಭೀರವಾಗಿಲ್ಲ. ಇತ್ತ ಆಮೆಯ ಚಿಪ್ಪಿಗೂ ಚಿಕ್ಕ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಆಮೆಯನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...