alex Certify ದಕ್ಷಿಣ ಕೊರಿಯಾದಲ್ಲಿ ಸಾಕು ಪ್ರಾಣಿಗಳಲ್ಲೂ ಕೊರೊನಾ ಸೋಂಕು ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಕೊರಿಯಾದಲ್ಲಿ ಸಾಕು ಪ್ರಾಣಿಗಳಲ್ಲೂ ಕೊರೊನಾ ಸೋಂಕು ದೃಢ

ದಕ್ಷಿಣ ಕೊರಿಯಾದಲ್ಲಿ ಬೆಕ್ಕಿನ ಮರಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದ ಮೊದಲ ಪ್ರಕರಣ ಇದಾಗಿದೆ.

ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಆಗ್ನೇಯ ನಗರವಾದ ಜಿಂಜುವಿನಲ್ಲಿರುವ ಧಾರ್ಮಿಕ ಕೇಂದ್ರವೊಂದರಲ್ಲಿ ಈ ಸೋಂಕು ವರದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಹರಡುವಿಕೆ ಸಂಬಂಧ ನಡೆಸಲಾದ ಇತ್ತೀಚಿನ ಟ್ರ್ಯಾಕಿಂಗ್​​ನಲ್ಲಿ ಸಾಕುಪ್ರಾಣಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ ಅನ್ನೋದನ್ನ ಆರೋಗ್ಯ ಅಧಿಕಾರಿಗಳು ಕನ್ಫರ್ಮ್ ಮಾಡಿದ್ದಾರೆ.

ಧಾರ್ಮಿಕ ಕೇಂದ್ರದಲ್ಲಿ ತಾಯಿ ಬೆಕ್ಕು ಹಾಗೂ ಎರಡು ಮರಿ ಬೆಕ್ಕುಗಳನ್ನ ಸಾಕಲಾಗಿತ್ತು. ಈ ಎರಡು ಮರಿಗಳಲ್ಲಿ ಒಂದು ಮರಿ ಸೋಂಕಿಗೆ ಒಳಗಾಗಿದೆ. ತಾಯಿ ಬೆಕ್ಕು ಕೂಡ ಕೊರೊನಾ ಸೋಂಕಿಗೆ ಒಳಗಾಗಿದೆ. ಬೆಕ್ಕಿನ ಮಾಲೀಕರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...