alex Certify ಬಾಹ್ಯಾಕಾಶದಿಂದ ಸೂರ್ಯೋದಯ – ಸೂರ್ಯಾಸ್ತ ಹೇಗೆ ಕಾಣುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಿಂದ ಸೂರ್ಯೋದಯ – ಸೂರ್ಯಾಸ್ತ ಹೇಗೆ ಕಾಣುತ್ತೆ ಗೊತ್ತಾ…?

Ever Wondered What the Sunrise and Sunset Look from Space? Here You Go

ಸಾಮಾಜಿಕ ಜಾಲತಾಣದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಚಿತ್ರಗಳು ಸಖತ್‌ ಜನಪ್ರಿಯವಾಗಿವೆ. ಸಮುದ್ರ ತೀರ, ಬೆಟ್ಟಗುಡ್ಡಗಳ ನಡುವೆ ಸೆರೆ ಹಿಡಿದ ಸೂರ್ಯನ ಚಿತ್ರಗಳು ಸಖತ್‌ ಮೋಡಿ ಮಾಡುತ್ತವೆ.

ಆದರೆ ಬಾಹ್ಯಾಕಾಶದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತ ಹೇಗೆ ಕಾಣಬಹುದು ಎಂಬ ಕುತೂಹಲ ನಿಮ್ಮದೇ? ಈ ಕುತೂಹಲವನ್ನು ತಣಿಸಿದ್ದಾರೆ ನಾಸಾ ಗಗನಯಾತ್ರಿ ವಿಕಟರ್‌ ಗ್ಲೋವರ್‌.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ಛಾಯಾಗ್ರಹಣದ ಕೌಶಲ್ಯವನ್ನು ಬಳಸಿರುವ ವಿಕ್ಟರ್‌, ಅಲ್ಲಿಂದ ಸೂರ್ಯನ ಎರಡು ಚಿತ್ರಗಳನ್ನು ಸೆರೆಹಿಡಿದು, ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ನನಗೆ ಸೂರ್ಯೋದಯ ಹಾಗೂ ಸೂರ್ಯಾಸ್ತ ಎಂದರೆ ಇಷ್ಟ. ಬಣ್ಣಗಳ ಬ್ಯಾಂಡ್ ‌ಅನ್ನು ಗಮನಿಸಿದ್ದೀರಾ? ಸಾಮ್ 30ರಲ್ಲಿರುವ ಲಿಪಿಗಳನ್ನು ಇದು ನೆನಪಿಸುತ್ತದೆ. ನೋವೆಂಬುದನ್ನು ಒಂದು ರಾತ್ರಿವರೆಗೂ ಸಹಿಸಿಕೊಂಡರೆ ಸಂತಸದ ಮುಂಜಾನೆ ಬಂದೇ ಬರುತ್ತದೆ. ಸೂರ್ಯೋದಯಕ್ಕೂ ಕೆಲವೇ ಕ್ಷಣಗಳ ಮುಂಚೆ ಹೆಚ್ಚು ಕತ್ತಲು ಎಂಬಂತೆ ಕಾಣುತ್ತದೆ. ನಿಮ್ಮೆಲ್ಲರಿಗೂ ಪ್ರೀತಿಯ ಶುಭರಾತ್ರಿ. ಬಾಹ್ಯಾಕಾಶ ಕೇಂದ್ರದಿಂದ ಗುಡ್‌ನೈಟ್‌” ಎಂದು ವಿಕ್ಟರ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...